Connect with us

Chitradurga

ಸಿದ್ದರಾಮಯ್ಯ ಸರ್ಕಾರಕ್ಕೆ 4 ವರ್ಷ- ಕೋಟೆನಾಡಲ್ಲಿ ಬೃಹತ್ ಸಮಾವೇಶ

Published

on

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಇವತ್ತಿಗೆ ನಾಲ್ಕನೇ ವರ್ಷ ಸಂಪೂರ್ಣ. 2013ರಲ್ಲಿ ಅಧಿಕಾರಕ್ಕೇರಿದ ಸರ್ಕಾರ ಐದನೇ ವರ್ಷಕ್ಕೆ ಕಾಲಿಡುತ್ತಿದೆ.

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಹತ್ತು ತಿಂಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳನ್ನು ಬಿಂಬಿಸುವ ಸಲುವಾಗಿ ಸಮಾವೇಶ ಆಯೋಜಿಸಿದೆ. ಕೋಟೆನಾಡು ಚಿತ್ರದುರ್ಗದ ವಿಜ್ಞಾನ ಕಾಲೇಜು ಮೈದಾನದಲ್ಲಿ ಸೌಲಭ್ಯ ವಿತರಣೆಯೇ ಸಂಭ್ರಮ ಹೆಸರಿನ ಸಮಾರಂಭಕ್ಕೆ ಜನರಿಗೆ ಮನನ-ಜನರಿಗೆ ನಮನ ಅನ್ನೋ ಉಪ ಶೀರ್ಷಿಕೆಯನ್ನೂ ನೀಡಲಾಗಿದೆ. ಈ ಸಮಾವೇಶಕ್ಕೆ 2 ಕೋಟಿ ರೂಪಾಯಿ ಖರ್ಚು ಮಾಡಲಾಗ್ತಿದೆ. ಇಲಾಖಾವಾರು ಸಾಧನೆಗಳ ಪಟ್ಟಿಗಾಗಿಯೇ ಪ್ರತ್ಯೇಕ ಕೌಂಟರ್‍ಗಳನ್ನು ತೆರೆಯಲಾಗಿದೆ.

ಭಾಗ್ಯಗಳ ಸರದಾರ, ಅಹಿಂದ ಪರ ಎನ್ನಿಸಿಕೊಂಡ ಸಿದ್ದರಾಮಯ್ಯ ಅನೇಕ ಟೀಕೆಗಳು, ಆರೋಪಗಳಿಂದ ಹೊರತಾಗಿಲ್ಲ. ಸಿದ್ದರಾಮಯ್ಯ ವೈಯುಕ್ತಿಕವಾಗಿ ಸಕ್ಸಸ್ ಆದ್ರೆ, ಪಕ್ಷಕ್ಕೆ ಸಕ್ಸಸ್ ತರುವ ವಿಚಾರದಲ್ಲಿ ಸೋತಿದ್ದಾರೆ ಅನ್ನೋ ಲೆಕ್ಕಚಾರಗಳು ನಡೆದಿವೆ. ಹಾಗಾದ್ರೆ ಸಿದ್ದು ಸರ್ಕಾರದ ಕಳಂಕಗಳು, ಸಾಧನೆಗಳು, ಸಂಕಷ್ಟಗಳು ಏನು ಅನ್ನೋದನ್ನ ನೋಡೋದಾದ್ರೆ:

> 4 ವರ್ಷದ 4 ಕಳಂಕಗಳು
1. ಹೈಕಮಾಂಡ್‍ಗೆ ಕಪ್ಪ ಡೈರಿ.
2. ವಿವಾದಾತ್ಮಕ ಸ್ಟೀಲ್ ಬ್ರಿಡ್ಜ್ ಯೋಜನೆ.
3. ಹ್ಯುಬ್ಲೋಟ್ ವಾಚ್ ಪ್ರಕರಣ.
4. ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ಆರೋಪ.

> 4 ಕೇಸು; 4 ರಾಜೀನಾಮೆ
1. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಂತೋಷ್ ಲಾಡ್ ರಾಜೀನಾಮೆ.
2. ಡಿವೈಎಸ್‍ಪಿ ಅನುಪಮಾ ಶೆಣೈ ಪ್ರಕರಣ – ಪಿ.ಟಿ. ಪರಮೇಶ್ವರ ನಾಯ್ಕ್ ತಲೆದಂಡ.
3. ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ.
4. ರಾಸಲೀಲೆ ಪ್ರಕರಣದಲ್ಲಿ ಸಚಿವ ಎಚ್.ವೈ. ಮೇಟಿ ರಾಜೀನಾಮೆ.

> 4 ವರ್ಷದ 4 ಪ್ರಮುಖ ಸಾಧನೆಗಳು
1. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ ಯೋಜನೆ.
2. ರಾಜ್ಯಾದ್ಯಂತ ಶುದ್ಧ ನೀರಿನ ಘಟಕಗಳ ಆರಂಭ.
3. ಬುಡಕಟ್ಟು, ತಾಂಡಾದಲ್ಲಿ ವಾಸಿಸುವವರೇ ಮನೆ ಒಡೆಯ ಹಕ್ಕು.
4. ತಮಿಳುನಾಡು ಮಾದರಿಯಲ್ಲೇ ಇಂದಿರಾ ಕ್ಯಾಂಟೀನ್.

Click to comment

Leave a Reply

Your email address will not be published. Required fields are marked *