ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರದ ಸಚಿವರೊಬ್ಬರ ತಲೆದಂಡವಾಗುವ ಸಾಧ್ಯತೆಯಿದೆ
ಹೌದು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ (RB Thimmapur) ರಾಜೀನಾಮೆ ಪಡೆಯಲು ಸಿದ್ಧತೆ ನಡೆಯುತ್ತಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲೇ ಕೇಳಿ ಬಂದಿದೆ.
ಅಬಕಾರಿ ಇಲಾಖೆಯಲ್ಲಿ (Excise Department) 700 ಕೋಟಿ ರೂ. ಹಗರಣದ (Scam) ಆರೋಪ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿತ್ತು. ಮಹಾರಾಷ್ಟ್ರ ಚುನಾವಣೆಯಲ್ಲೂ ಕಾಂಗ್ರೆಸ್ ಪಾಲಿಗೆ ಕಿರಿಕಿರಿಯಾಗಿತ್ತು. ರಾಜ್ಯಪಾಲರಿಗೆ ದೂರು ನೀಡಿ, ಬಂದ್‌ಗೂ ಬಾರ್ ಮಾಲೀಕರು ಮುಂದಾಗಿದ್ದರು.
ಮಹಾರಾಷ್ಟ್ರ ಚುನಾವಣೆಯ ಸಮಯದಲ್ಲೂ ವಿಪಕ್ಷಗಳು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದು ಕಾಂಗ್ರೆಸ್‌ಗೆ ಇರುಸು ಮುರುಸು ತಂದಿತ್ತು. ಈ ವಿಚಾರದಿಂದ ಸಚಿವ ತಿಮ್ಮಾಪುರ್ ಮೇಲೆ ಹೈಕಮಾಂಡ್ ಭಾರೀ ಅಸಮಾಧಾನಗೊಂಡಿತ್ತು. ಇದನ್ನೂ ಓದಿ: ಟೋಲ್ ಕಟ್ಟದೇ ಕೈ ಮುಖಂಡನಿಂದ ದರ್ಪ – ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ
ತಿಮ್ಮಾಪುರ್ ರಾಜೀನಾಮೆ ವಿಚಾರದಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡು ಬನ್ನಿ ಎಐಸಿಸಿ ನಾಯಕರು ಸಿದ್ದರಾಮಯ್ಯಗೆ ಸೂಚಿಸಿದ್ದರು. ಎಐಸಿಸಿ ಪ್ರಮುಖ ನಾಯಕರ ಜೊತೆಗಿನ ಮಾತುಕತೆಯ ವೇಳೆ ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂಬ ಸಂದೇಶವನ್ನು ಸಿಎಂ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಎರಡು ಕರ್ನಾಟಕದ ಉಪಚುನಾವಣೆ ಮತ್ತು ಜಾರ್ಖಂಡ್, ಮಹಾರಾಷ್ಟ್ರ ಚುನಾವಣೆಯ ಬಳಿಕ ತಿಮ್ಮಾಪೂರ್ ವಿಚಾರದಲ್ಲಿ ಹೈಕಾಂಡ್ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.