ರಾಯಚೂರು: ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ (Siddaramaiah) ಜೈಲಿಗೆ ಹೋಗ್ತಾರೆ ಅಂತಾ ನಾನು ಈ ಮೊದಲು ಹೇಳಿದ್ದೆ, ಈಗಲೂ ಹೇಳುತ್ತೇನೆ. ಜಸ್ಟೀಸ್ ಕೆಂಪಣ್ಣ ಕೊಟ್ಟ ವರದಿ ವಿಧಾನಸಭೆಯಲ್ಲಿ ಸಿಎಂ ಓದಿದ್ದಾರೆ. ಕೊನೆ ಸಾಲಿನ ಆದೇಶ ಓದಿದ್ದಾರೆ. ಲೋಕಾಯುಕ್ತ (Lokayukta) ಕ್ಕೆ ಕೊಟ್ಟು ಸಂಪೂರ್ಣ ತನಿಖೆ ಮಾಡಿಸಲಾಗುತ್ತೆ, ಯಾರ್ಯಾರು ನಾಯಕರು ಪ್ರಕರಣದಲ್ಲಿ ಇದ್ದಾರೆ ಅವರ ವಿರುದ್ಧ ಕ್ರಮ ಆಗುತ್ತೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
Advertisement
ರಾಯಚೂರಿನ ಲಿಂಗಸುಗೂರಿನಲ್ಲಿ ಮಾತನಾಡಿದ ಕಟೀಲ್, ಸಿದ್ದರಾಮಯ್ಯ ಬಹುಮತ ಸರ್ಕಾರ ಇದ್ದಾಗ ಹಗರಣ ಆಗಿತ್ತು. ತಾವು ಸಿಕ್ಕಿ ಬೀಳುತ್ತೇವೆ ಅಂತ ಲೋಕಾಯುಕ್ತವನ್ನು ಮುಚ್ಚಿಸಿದ್ದರು. ಹಲ್ಲಿಲ್ಲದ ಎಸಿಬಿಯನ್ನ ಹುಟ್ಟುಹಾಕಿದರು. ನ್ಯಾ.ಕೆಂಪಣ್ಣ ವರದಿಯನ್ನು ಮುಚ್ಚಿಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದರು. ಈಗ ಆ ವರದಿ ದಾಖಲಾತಿಗಳನ್ನ ಇಟ್ಟುಕೊಂಡು ತನಿಖೆ ಮಾಡಿಸುತ್ತೇವೆ. ಹಗರಣದಲ್ಲಿದ್ದವರು ಜೈಲಿಗೆ ಹೋಗ್ತಾರೆ ಅಂತ ಕಟೀಲ್ ಹೇಳಿದ್ದಾರೆ.
Advertisement
Advertisement
ಅಮಿತ್ ಶಾ, ಜನಾರ್ದನ ರೆಡ್ಡಿಯನ್ನು ನೋಡಿಕೊಳ್ಳುತ್ತೇನೆ ಎಂಬ ಹೇಳಿಕೆಗೆ ಹೆಚ್.ಡಿ.ಕೆ ಪ್ರತಿಕ್ರಿಯೆ ವಿಚಾರವಾಗಿ ಮಾತನಾಡಿದ ಕಟೀಲ್ (Nalin Kumar Kateel), ಅಮಿತ್ ಶಾ (AmitShah) ಜನಾರ್ದನ ರೆಡ್ಡಿ (Janaradhan Reddy) ಯನ್ನು ನೋಡಿಕೊಳ್ಳುವುದಾಗಿ ಹೇಳಿಲ್ಲ. ನೀವು ತಲೆ ಕೆಡಿಸಿಕೊಳ್ಳುವುದು ಬೇಡ ಅಂತ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗೆ ವೇದಿಕೆ ಹಂಚಿಕೊಳ್ಳಲು ನಾನ್ ರೆಡಿ: ರಮೇಶ್ ಜಾರಕಿಹೊಳಿ
Advertisement
ಇದೇ ವೇಳೆ ಸಿ.ಟಿ ರವಿ (CT Ravi) ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿ.ಟಿ ರವಿ ಈಗಾಗಲೇ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳದ ಒಳಗೆ ಹೋಗಿದ್ರು. ಸಿಟಿ ರವಿ ದೇವಸ್ಥಾನದ ಒಳಗೆ ಹೋಗಿಲ್ಲ, ಇಬ್ಬರಿಗೂ ವ್ಯತ್ಯಾಸ ಇದೆ ಎಂದರು.
ಬಿಜೆಪಿ ರಾಷ್ಟ್ರೀಯ ನಾಯಕರ ಪ್ರವಾಸದಿಂದಾಗಿ ಕಾರ್ಯಕರ್ತರಲ್ಲಿ, ಪಕ್ಷದ ಮುಖಂಡರಲ್ಲಿ ಉತ್ಸಾಹ ಹೆಚ್ಚಾಗಿದೆ. ರಾಜ್ಯದಲ್ಲಿ ಅತ್ಯುತ್ತಮ ಬಜೆಟ್ ಮಂಡನೆಯಾಗಿದೆ. ಎಸ್.ಸಿ, ಎಸ್‍ಟಿ ಗೆ ಮೀಸಲಾತಿ ನೀಡಿದ್ದೇವೆ. ಮಾರ್ಚ್ ಒಂದರಿಂದ ಪ್ರಗತಿ ರಥಯಾತ್ರೆ ಪ್ರಾರಂಭವಾಗಲಿದೆ ಅಂತ ನಳಿನ್‍ಕುಮಾರ್ ಕಟೀಲ್ ಹೇಳಿದರು.