ಮೈಸೂರು: ತಾಲೂಕು ಅಭಿವೃದ್ಧಿ ಮಂಡಳಿಯಿಂದ ನೇರವಾಗಿ ಸಂಸತ್‌ಗೆ ಹೋಗಲು ಸಿದ್ದರಾಮಯ್ಯ (Siddaramaiah) ಯತ್ನಿಸಿದ್ದರು. ನಂತರ ಕೊಪ್ಪಳದಿಂದಲೂ (Koppal) ಎರಡನೇ ಪ್ರಯತ್ನ ನಡೆಸಿದ್ದರು. ಎರಡೂ ವಿಫಲವಾದವು.
1978 ರಲ್ಲಿ ಸಿದ್ದರಾಮಯ್ಯ ಅವರು ಮೈಸೂರು (Mysuru) ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದರು. 1980 ರಲ್ಲಿ ಲೋಕಸಭಾ ಚುನಾವಣೆ ಎದುರಾದಾಗ ಜನತಾಪಕ್ಷ (ಎಸ್) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಅವರಿಗೆ ಬಂದ ಮತ 8,327 ಮಾತ್ರ! 1,95,724 ಮತಗಳನ್ನು ಪಡೆದ ಕಾಂಗ್ರೆಸ್-ಐನ ಎಂ.ರಾಜಶೇಖರಮೂರ್ತಿ ಆಗ ಗೆದ್ದಿದ್ದರು. ಇದನ್ನೂ ಓದಿ: 2019 ರಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಬಂದ ಮತ ಎಷ್ಟು?
Advertisement
ಇದಾದ ನಂತರ ಸಿದ್ದರಾಮಯ್ಯ 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ‘ತಕ್ಕಡಿ’ ಗುರುತಿನಲ್ಲಿ ಸ್ಪರ್ಧಿಸಿ, ಪ್ರಥಮ ಬಾರಿಗೆ ಚುನಾಯಿತರಾದರು. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷರಾದರು. ನಂತರ ಹೆಗಡೆ ಅವರು ಸಂಪುಟಕ್ಕೆ ತೆಗೆದುಕೊಂಡು ರೇಷ್ಮೆ ಖಾತೆ ನೀಡಿದರು.
Advertisement
Advertisement
Advertisement
1985 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಸಿದ್ದರಾಮಯ್ಯ ಅವರು ಹೆಗಡೆ ಹಾಗೂ ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಕ್ರಮವಾಗಿ ಪಶುಸಂಗೋಪನೆ, ಸಾರಿಗೆ ಸಚಿವರಾಗಿದ್ದರು. 1989ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತಿದ್ದರು. ಇದನ್ನೂ ಓದಿ: ರಾಜರೂರಿನವರು ಮಂತ್ರಿಗಳೇ ಆಗಲಿಲ್ಲ!
ಆಗ 1991 ರಲ್ಲಿ ಲೋಕಸಭಾ ಚುನಾವಣಾ ಎದುರಾದಾಗ ಸಿದ್ದರಾಮಯ್ಯ ಕೊಪ್ಪಳದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕಾಂಗ್ರೆಸ್ ಬಸವರಾಜ್ ಪಾಟೀಲ್ ಅನ್ವರಿ 2,41.176 ಮತಗಳನ್ನು ಪಡೆದು ಚುನಾಯಿತರಾದರು. ಸಿದ್ದರಾಮಯ್ಯ 2,29,979 ಮತಗಳನ್ನು ಪಡೆದು, 11,197 ಮತಗಳ ಅಂತರದಿಂದ ಸೋತರು. ಇದಾದ ನಂತರ ಅವರು ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಪ್ರಯತ್ನ ಮಾಡಲಿಲ್ಲ.