ಬೆಂಗಳೂರು: ಎಲೆಕ್ಷನ್ ಸನಿಹದಲ್ಲಿದ್ದಾಗಲೂ ರಾಜ್ಯ ಕಾಂಗ್ರೆಸ್‍ನಲ್ಲಿನ (Congress) ಬಣ ಸಂಘರ್ಷಗಳು, ಪ್ರತಿಷ್ಠೆಯ ಸಮರಗಳು ಮುಂದುವರೆದಿವೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ನಡುವೆ ಮುಸುಕಿನ ಗುದ್ದಾಟ ಜೋರಾಗಿ ನಡೆದಿದೆ.
Advertisement
ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಯಾವುದೇ ಹೇಳಿಕೆ ನೀಡುವಾಗ, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಇಬ್ಬರು ಪರಸ್ಪರ ವಿಶ್ವಾಸಕ್ಕೆ ತೆಗೆದುಕೊಳ್ತಿಲ್ಲ. ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ವರ್ತೂರು ಬಳಿಯ ಖಾಸಗಿ ಹೋಟೆಲ್‍ನಲ್ಲಿ ಆಕಾಂಕ್ಷಿಗಳ ಸಭೆ ಕರೆದಿದ್ರು. ಆದ್ರೆ, ಹೀಗೆ ಮಾಡುತ್ತಿದ್ದೇವೆ ನೀವು ಬನ್ನಿ ಎಂದು ಸಿದ್ದರಾಮಯ್ಯಗೆ ಮೊದಲೇ ತಿಳಿಸಿರಲಿಲ್ಲ. ಬದಲಾಗಿ ತಡವಾಗಿ ವಿಷಯ ತಿಳಿಸಿದ್ರು. ಹೀಗಾಗಿಯೇ ವಿಶ್ರಾಂತಿ ನೆಪ ಹೇಳಿದ ಸಿದ್ದರಾಮಯ್ಯ ಇಂದಿನ ಸಭೆಗೆ ಗೈರಾಗಿದ್ರು. ಇದನ್ನೂ ಓದಿ: ವೋಟರ್ ಗೇಟ್ ಹಗರಣ – 3 ಕ್ಷೇತ್ರ ಉಸ್ತುವಾರಿಗಳ ಅಮಾನತುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ
Advertisement
Advertisement
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕರೆ ಮಾಡಿದ್ರೂ ನಾನು ಬರೋಕೆ ಆಗಲ್ಲ. ವಿಶ್ರಾಂತಿ ಬೇಕು ಎಂದು ಸಿದ್ದರಾಮಯ್ಯ ಹೇಳಿದ್ರು ಎನ್ನಲಾಗಿದೆ. ಅಲ್ಲದೇ, ತಮ್ಮ ಆಪ್ತರಿಗೂ ಆ ಸಭೆಗೆ ಹೋಗದಂತೆ ಸೂಚಿಸಿದ್ರು. ಈ ನಡುವೆ ಡಿ.ಕೆ ಸುರೇಶ್ ನಿವಾಸದಲ್ಲಿ ಕರೆದಿದ್ದ ಹಿರಿಯ ನಾಯಕರ ಸಭೆಗೂ ಗೈರಾಗುವ ಮೂಲಕ ಸಿದ್ದರಾಮಯ್ಯ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಕಚೇರಿಯಿಂದ ಕಾಣೆಯಾಯ್ತಾ ಬಿಬಿಎಂಪಿ ಫೈಲ್? – ಸಾವಿರಾರು ಕೋಟಿ ರೂ. ವ್ಯವಹಾರದ ಕಡತ ನಾಪತ್ತೆ
Advertisement
ಕೊನೆಗೆ ಉಭಯ ಸಭೆಗಳು ಕೂಡ ರದ್ದಾಗಿವೆ. ಈ ಮಧ್ಯೆ, ಉರಿವ ಬೆಂಕಿಗೆ ತುಪ್ಪ ಸುರಿದಂತೆ, ಒಬ್ಬರಿಗೆ ಒಂದೇ ಟಿಕೆಟ್. ಎಂದು ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ. ಪಕ್ಷ ಮುಖ್ಯ. ಇಲ್ಲಿ ಯಾರ್ಯಾರ ಶಕ್ತಿ ಎಷ್ಟಿದೆ ಎಂದು ಹೇಳಲು ಆಗಲ್ಲ ಎಂದು ಕೂಡ ಹೇಳಿದ್ದಾರೆ. ಈ ಮೂಲಕ ಕೋಲಾರ, ವರುಣಾದಲ್ಲಿ ಸ್ಪರ್ಧಿಸಬಯಸಿದ್ದ ಸಿದ್ದರಾಮಯ್ಯಗೆ ಡಿಕೆಶಿ ಟಾಂಗ್ ನೀಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.