ಚಾಮುಂಡೇಶ್ವರಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ರೂ ಜನ ಸೋಲಿಸಿಬಿಟ್ರು: ಸಿದ್ದರಾಮಯ್ಯ

Public TV
4 Min Read
Siddaramaiah Bagalkote

– ಬಾದಾಮಿ ಜನ ಒಳ್ಳೆಯವರು ಒಂದೇ ದಿನ ಪ್ರಚಾರ ಮಾಡಿದ್ದರು ಗೆಲ್ಲಿಸಿಬಿಟ್ಟರು

ಬಾಗಲಕೋಟೆ: ಚಾಮುಂಡೇಶ್ವರಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರು ಜನ ಸೋಲಿಸಿಬಿಟ್ಟರು. ಆದರೆ ಬಾದಾಮಿ ಜನ ಒಳ್ಳೆಯವರು ಒಂದೇ ದಿನ ಪ್ರಚಾರ ಮಾಡಿದ್ದರು ಗೆಲ್ಲಿಸಿಬಿಟ್ಟರು. ಚಾಮುಂಡೇಶ್ವರಿ ಸೋಲಿನ ಕಹಿ ನೆನಪುಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮೆಲಕು ಹಾಕಿದ್ದಾರೆ.

Siddaramaiah Bagalkote 1

ಬಾದಾಮಿ ಜನ ಬಹಳ ಒಳ್ಳೆಯವರು, ನಾನು ಒಂದಿನ ಬಂದು ನಾಮಿನೇಷನ್ ಹಾಕಿದೆ, ಒಂದು ದಿನವಷ್ಟೆ ಪ್ರಚಾರಕ್ಕೆ ಬಂದಿದ್ದೇನು. ಬಾದಾಮಿಯಲ್ಲಿ ಜನ ನನ್ನನ್ನು ಗೆಲ್ಲಿಸಿಬಿಟ್ಟರು. ಆ ಚಾಮುಂಡೇಶ್ವರಿ ಜನ ಅಷ್ಟೊಂದು ಅಭಿವೃದ್ಧಿ ಮಾಡಿದರೂ ಸೋಲಿಸಿ ಬಿಟ್ಟರು ಎಂದು ಮತ್ತೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋಲಿನ ಕುರಿತಾಗಿ ಬಾದಾಮಿಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ತಾಯಿ ನಿಧನ

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಶಂಕರಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ತ್ರಿಸ್ಟಾರ್ ಹೊಟೇಲ್ ನಿರ್ಮಾಣದ ಅಡಿಗಲ್ಲು ಸಮಾರಂಭದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಎರಡು ಬಾರಿ ಮಾತ್ರ ಜನ ಗೆಲ್ಲಿಸಿದ್ದಾರೆ. ಈಗ ನಮ್ಮ ಹುಡುಗನ ಗೆಲ್ಲಿಸಿದ್ದಾರೆ. ಈ ಕಾಪು ಸಿದ್ದಲಿಂಗಸ್ವಾಮಿ ಇದಾನಲ್ಲ ಇವನು ನನ್ನ ವಿರುದ್ಧ ಸ್ಪರ್ಧಿಸಿದ್ದರು. 2013ರಲ್ಲಿ ಏನಯ್ಯಾ ಸಿದ್ದಲಿಂಗಸ್ವಾಮಿ ಎಂದು ಕೇಳಿದ್ದೇನು. ರಾಜಕಾರಣಿಗಳು ಹೇಗಿರುತ್ತಾರೋ ಹಾಗೆ ಜನ ಇರುತ್ತಾರೆ ಎಂದಿದ್ದಾರೆ.

ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬರಬಾರದು. ನಾವು ವೈಯಕ್ತಿಕವಾಗಿ ಯಾರೂ ವೈರಿಗಳು ಅಲ್ಲ. ಚುನಾವಣೆ ಬಂದಾಗ ಚುನಾವಣೆ ಮಾಡೋಣ. ಮತ್ತೇ ಎಲೆಕ್ಷನ್ ಬಂತು, ಇನ್ನೂ ಒಂದೂವರೆ ವರ್ಷ ಇದೆ. ಒಂದೇ ಒಂದು ತಾಪತ್ರಯ ಎಂದರೆ ನಾನು ಬಾದಾಮಿಗೆ ಪದೇ ಪದೇ ಬರಲು ಆಗುತ್ತಿಲ್ಲ. ನಾನು ಬಾದಾಮಿ ನಿವಾಸಿನೂ ಅಲ್ಲ. ಸಂಸದ ಪಿಸಿ ಗದ್ದಿಗೌಡ ಬಾದಾಮಿ ನಿವಾಸಿ, ಹಾಗಂತ ಬಾದಾಮಿ ಅಭಿವೃದ್ಧಿಯಲ್ಲಿ ನಾನು ಹಿಂದೆ ಬಿದ್ದಿಲ್ಲ, ಮುಂಚೂಣಿಯಲ್ಲಿದ್ದೇನೆ. ಬಾದಾಮಿ ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರ ಮಾಡಲಾಗುತ್ತಿದೆ. ಬಾದಾಮಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಭೂಪಟದಲ್ಲಿದೆ. ಪ್ರವಾಸಿ ತಾಣದ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಲಾಗುವುದು. ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತ. ಪ್ರವಾಸೋದ್ಯಮ ಸಚಿವರಾಗಿ ಇರುವವರೆಗೂ ಬಾದಾಮಿ ಪ್ರವಾಸಿ ತಾಣ ಅಭಿವೃದ್ಧಿಗೆ ಅನುದಾನ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ಏನಯ್ಯ ಅನುದಾನ ಕೊಡುತ್ತೀಯೊ ಇಲ್ಲವೋ ಎಂದು ಆನಂದ್ ಸಿಂಗ್ ಅವರನ್ನು ಸಿದ್ದರಾಮಯ್ಯ ಕೇಳಿದರು. ಕೊಡುತ್ತೇನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತಪ್ಪಿದ ದೊಡ್ಡ ದುರಂತ – ಇದ್ದಕಿದ್ದಂತೆ ಕುಸಿದ ಮನೆ

ಪುರಾತತ್ವ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಅದೊಂದು ತೊಂದರೆ ಕೊಡುವ ಇಲಾಖೆ . ಬಾದಾಮಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಬರುತ್ತಾರೆ. ಸ್ಮಾರಕಗಳ ಸಂರಕ್ಷಣೆ ಮಾಡಲಿ ಆದರೆ ಪ್ರತಿಯೊಂದಕ್ಕೂ ಅಡ್ಡಿ ಬಂದು ಅನುಮತಿ ತೆಗೆದುಕೊಳ್ಳಿ ಎನ್ನುತ್ತಾರೆ. ಹೀಗಾಗಿ ಸಂಸದ ಪಿ ಸಿ ಗದ್ದಿಗೌಡ ನೀವೂ ಪುರಾತತ್ವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಿ, ನಾನು ಈಗೊಮ್ಮೇ ಕರೆದು ಹೇಳಿದ್ದೇನೆ. ಪುರಾತತ್ವ ಇಲಾಖೆ ಏನು ಅಮೇರಿಕಾದಲ್ಲಿ ಇದೆ ಎಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೆ ಏನು? ಅದು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಇಲಾಖೆ. ಭಾರತ ದೇಶದಲ್ಲಿ ಇರುವ ಇಲಾಖೆಯಾಗಿದೆ. ಎಲ್ಲಾದಕ್ಕೂ ಅಡ್ಡಿ ಬರುತ್ತಾರೆ. ಮನೆ, ಶೌಚಾಲಯ, ನೀರಿನ ಟ್ಯಾಂಕ್, ಕಟ್ಟಿಕೊಳ್ಳಬೇಕಾದರೂ ಅಡ್ಡಿ ಪಡಿಸುತ್ತಾರೆ. ನಿಮ್ಮ ಕ್ಷೇತ್ರ ಹಂಪಿಯಲ್ಲೂ ಹೀಗೆ ಇದೆ ಆಲ್ಲವಾ ಎಂದು ಸಚಿವ ಆನಂದ್ ಸಿಂಗ್ ಅವರನ್ನು ಸಿದ್ದರಾಮಯ್ಯ ಕೇಳಿದರು. ಇದನ್ನೂ ಓದಿ:  ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ: ನಟಿ ವಿಜಯಲಕ್ಷ್ಮಿ

ಹೌದು ಎಲ್ಲದಕ್ಕೂ ಅಡ್ಡಿಪಡಿಸುತ್ತಾರೆ. ಬಾದಾಮಿ ಅಭಿವೃದ್ಧಿ ಹಿನ್ನೆಡೆಗೆ ಇದು ಒಂದು ಕಾರಣವಿದೆ. ನಾನು ಮುಖ್ಯಮಂತ್ರಿ ಇದ್ದಾಗ ಬಾದಾಮಿ ಅಭಿವೃದ್ಧಿ ಪಡಿಸಲಿಕ್ಕೆ ಆಗಲಿಲ್ಲ. ಯಾಕೆಂದರೆ ಯಾರ ಒತ್ತಾಯವೂ ಇರಲಿಲ್ಲ. ನಾನು ಬಾದಾಮಿ ಶಾಸಕನಾದ ಮೇಲೆ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *