– ಅಚ್ಚೇದಿನ್ ಬಂತೇನ್ರಪ್ಪ – ಸಿದ್ದು ಪಂಚ್
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನಾನು ಜೆಡಿಎಸ್ (JDS) ಅಭ್ಯರ್ಥಿ ಪರ ನಿಲ್ಲುವಂತೆ ಹೇಳಿದ್ದೆ, ಆದ್ರೆ ಜನರು ನನ್ನ ಮಾತು ಕೇಳಲಿಲ್ಲ. ಆಯಮ್ಮನನ್ನ ಗೆಲ್ಲಿಸಿದ್ದು ಸರಿಯಲ್ಲ ಅಂತಾ ಈವಾಗ ನನಗೆ ಅನಿಸ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಸುಮಲತಾ (Sumalatha Ambareesh) ಗೆಲುವಿಗೆ ಪಶ್ಚಾತಾಪ ಸೂಚಿಸಿದ್ದಾರೆ.
Advertisement
ಮಂಡ್ಯದ (Mandya) ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಚುನಾವಣಾ ಪ್ರಚಾರ (Election Campaign) ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ಚಲುವರಾಯಸ್ವಾಮಿ, ನರೇಂದ್ರ ಎಲ್ಲರಿಗೂ ಜೆಡಿಎಸ್ ಅಭ್ಯರ್ಥಿ ಪರ ನಿಲ್ಲುವಂತೆ ಹೇಳಿದ್ದೆ. ಆದ್ರೆ ಜನರು ನನ್ನ ಮಾತು ಕೇಳಲಿಲ್ಲ. ಆಯಮ್ಮನ್ನ ಗೆಲ್ಲಿಸಿದ್ದು ಸರಿಯಲ್ಲ ಅಂತಾ, ನನಗೆ ಈಗ ಅನಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 229 ಭಾರತೀಯರನ್ನು ಹೊತ್ತ 7ನೇ ವಿಮಾನ ಜೆಡ್ಡಾದಿಂದ ಬೆಂಗಳೂರಿನತ್ತ
Advertisement
Advertisement
ಮುಂದವರಿದು, ಬಿಜೆಪಿ ಸರ್ಕಾರ (BJP Government) ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ. ಬೀದಿ ಬೀದಿಯಲ್ಲಿ ಭ್ರಷ್ಟಚಾರದ ವಿಚಾರ ಚರ್ಚೆಯಾಗ್ತಿದೆ. ವಿಧಾನಸೌಧದ ಪ್ರತಿಗೋಡೆಗಳೂ ದುಡ್ಡು ದುಡ್ಡು ಅನ್ನುತ್ತಿವೆ. ಇಂತಹ 40 ಪರ್ಸೆಂಟ್ ಸರ್ಕಾರ ಇರಬೇಕಾ? ಮೋದಿ ಅಚ್ಚೇದಿನ್ ಆಯೇಗಾ ಅಂತಾರಲ್ಲ, ನಿಮಗೇನಾದ್ರು ಅಚ್ಚೇದಿನ್ ಬಂತೇನ್ರಪ್ಪ.? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರೇಪ್‍ನಿಂದ ರಕ್ಷಿಸಲು ಮೃತ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕಿದ ಪಾಕ್ ಪಾಲಕರು
Advertisement
ನಾಗಮಂಗಲ ಜನತೆ ತುಂಬಾ ಸಜ್ಜನರಿದ್ದಾರೆ. ನಿಮ್ಮ ಉತ್ಸಾಹ ನೋಡಿದ್ರೆ ನಮ್ಮ ಅಭ್ಯರ್ಥಿ ಚಲುವರಾಯಸ್ವಾಮಿ ಗೆಲ್ಲೋದು ಸೂರ್ಯ ಚಂದ್ರರಷ್ಟೇ ಸತ್ಯ ಅನ್ನಿಸುತ್ತಿದೆ. ಅವರು ಒಕ್ಕಲಿಗ ಸಮಾಜದ ಪ್ರಮುಖ ನಾಯಕರಲ್ಲಿ ಚಲುವರಾಯಸ್ವಾಮಿ ಕೂಡ ಒಬ್ಬರು. ಚೆಲುವರಾಯಸ್ವಾಮಿಗೆ ನಾಯಕತ್ವದ ಗುಣ ಇದೆ. ಅಂತಹವರನ್ನ ನೀವು ಗೆಲ್ಲಿಸಲೇಬೇಕು ಎಂದು ಮನವಿ ಮಾಡಿದ್ದಾರೆ.
ಅತಂತ್ರ ಬರಲಿ ಅಂತಾ ಕಾಯ್ತಿದ್ದಾರೆ:
ಇದೇ ವೇಳೆ ಜೆಡಿಎಸ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಜೆಡಿಎಸ್‌ನವರು ಅವಕಾಶವಾದಿಗಳು. ಅತಂತ್ರ ಸರ್ಕಾರ ಬರಲಿ ಅಂತಾ ಕಾಯುತ್ತಿದ್ದಾರೆ. ಯಾವುದೇ ಪೂರ್ಣ ಪ್ರಮಾಣದ ಸರ್ಕಾರ ಬರದಿರಲಿ ಅಂತಾ ನಿತ್ಯವೂ ಹೋಮ, ಹವನ, ಪೂಜೆ ಮಾಡ್ತಿದ್ದಾರೆ. ಎರಡೂ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬರಲಿ ಅಂತಾ ಪೂಜೆ ಮಾಡಿಸ್ತಿದ್ದಾರೆ. ಅವಕಾಶ ಸಿಕ್ಕರೇ ಕಾಂಗ್ರೆಸ್ ಜೊತೆಯಾದ್ರೂ ಹೋಗ್ತಾರೆ, ಬಿಜೆಪಿ ಜೊತೆಯಾದ್ರೂ ಹೋಗ್ತಾರೆ. ಈ ಬಾರಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಬೀಗಿದ್ದಾರೆ.