– ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತನ್ನ ಸಾರ್ಥಕಗೊಳಿಸಬೇಕು: ಸಿಎಂ
ಬೆಂಗಳೂರು: ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ಚಾಲನೆ ನೀಡಿದರು. ಹಿಂದೆಲ್ಲ ರಾಷ್ಟ್ರೀಯ ಹಬ್ಬಗಳು, ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನ ಸೌಧಕ್ಕೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿತ್ತು. ಆದ್ರೆ ಇಂದಿನಿಂದ ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ (Vidhana Soudha Lightings) ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ವರ್ಣರಂಜಿತ ವಿದ್ಯುತ್ ದೀಪಗಳಿಂದ ವಿಧಾನಸೌಧ ಗೊಳಿಸಲಿದೆ.
ವಿಧಾನಸೌಧದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಸಾರ್ವಜನಿಕರ ವೀಕ್ಷಣೆಗೆ ಅರ್ಪಿಸಿ, ಶುಭ ಹಾರೈಸಿದೆ.
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಕೆ ಮಾಡಲಾದ ಬಣ್ಣಬಣ್ಣದ ವಿದ್ಯುತ್ ದೀಪಗಳು ಐತಿಹಾಸಿಕ ವಿಧಾನಸೌಧದ ಮೆರುಗನ್ನು ಹೆಚ್ಚಿಸುವ ಜೊತೆಗೆ ನೋಡಗರ ಕಣ್ಮನ ಸೆಳೆಯಲಿದೆ. ವಿಧಾನಸೌಧವೀಗ… pic.twitter.com/ibpbrm9Wqs
— Siddaramaiah (@siddaramaiah) April 6, 2025
ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ ಉದ್ಘಾಟಿಸಿ ಮಾತನಾಡಿದ ಸಿಎಂ, ಸಂಸತ್ತು, ವಿಧಾನಸೌಧ ಜನರ ಮತ್ತು ರಾಜ್ಯದ ಹಾಗೂ ದೇಶದ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ದೇಗುಲಗಳು. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತನ್ನು ಪ್ರತಿಯೊಬ್ಬರೂ ಸಾರ್ಥಕಗೊಳಿಸುವ ರೀತಿಯಲ್ಲಿ ಕೆಲಸ ಮಾಡಿ ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಬೇಕು ಎಂದು ಕರೆ ನೀಡಿದರು.
ಕಳೆದ ಒಂದು ತಿಂಗಳಲ್ಲಿ ಎಲ್ಲ ಭಾಗಗಳಲ್ಲೂ ಅಲಂಕಾರ ಮಾಡಲಾಗಿದೆ. ಸಾರ್ವಜನಿಕರ ವೀಕ್ಷಣೆಗೂ ಅವಕಾಶ ಮಾಡಿಕೊಡುತ್ತೇವೆ. ಮುಂದಿನ 5 ವರ್ಷಗಳ ಮೈಟೆನ್ ಮಾಡೋಕೆ ಷರತ್ತು ಹಾಕಲಾಗಿದೆ. ಈ ಹಿಂದೆ ಗಣರಾಜ್ಯೋತ್ಸವ, ಸ್ವಾತಂತ್ರ‍್ಯ ದಿನಾಚರಣೆ ಮಹತ್ವದ ದಿನಗಳಲ್ಲಿ ದೀಪಾಲಂಕಾರಕ್ಕೆ ಲಕ್ಷಾಂತರ ಖರ್ಚು ಆಗ್ತಾ ಇತ್ತು. ಹೀಗಾಗಿ ವ್ಯವಸ್ಥೆ ಮಾಡಿದ್ದುಮ, ಮೈಸೂರು ಅರಮನೆ ರೀತಿ ಅಭಿವೃದ್ಧಿ ಮಾಡುತ್ತಾರೆ ಎಂಬ ನಂಬಿಕೆ ಇದೆ. ಟೀಂ ವರ್ಕ್ ಕೆಲಸ ಮಾಡಿ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುವ ಕೆಲಸವನ್ನ ಮಾಡ್ತೇವೆ ಎಂದು ಸಿಎಂ ಅಭಯ ನೀಢಿದರು.
ದೇಶಕ್ಕೆ ಸ್ವಾತಂತ್ರ‍್ಯ ಬಂದ ಮೇಲೆ ನಮ್ಮನ ನಾವು ಆಳ್ವಿಕೆ ಮಾಡಿಕೊಳ್ಳುವ ವ್ಯವಸ್ಥೆ ಬಂದಿತು. ಆಗ ವಿಧಾನಸೌಧ ನಿರ್ಮಾಣ ಮಾಡಿದ್ರು. ದೇಶದ ಸಮಸ್ಯೆ ಚರ್ಚೆ ಮಾಡೋಕೆ ಚುನಾಯಿತ ಪ್ರತಿನಿಧಿಗಳು, ಎಂಪಿಗಳು,ಶಾಸಕರು ಒಂದು ಕಡೆ ದೇಶದ ಆಯಾ ರಾಜ್ಯದ ಸಮಸ್ಯೆ ಚರ್ಚೆ ಮಾಡೋಕೆ ಕೇಂದ್ರ ಮಾಡಿದರು. ಅದಕ್ಕೆ ನಾವು ಪ್ರಜಾಪ್ರಭುತ್ವ ದೇವಾಲಯ ಅಂತ ಕೆರೆಯುತ್ತೇವೆ. ಕೆಂಗಲ್ ಹನುಮಂತಯ್ಯನವರ ಸರ್ಕಾರದ ಕೆಲಸ ದೇವರ ಕೆಲಸ ಅಂತ ಹೇಳಿದ್ದಾರೆ. ಇದನ್ನು ಜನಪ್ರತಿನಿಧಿಗಳ ಅರ್ಥಮಾಡಿಕೊಳ್ಳಬೇಕು. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ನನಗೆ ಸ್ವಾತಂತ್ರ‍್ಯ ಸಿಕ್ಕಿದೆ ಅನಿಸಬೇಕು. ಆಗ ಮಾತ್ರ ಸಮಾಜ ಕಟ್ಟಕಡೆಯ ಮನುಷ್ಯ ನೆಮ್ಮದಿ ಇರೋಕೆ ಸಾಧ್ಯ. ಜೊತೆಗೆ ಅಸಮಾನತೆ ತೆಗೆದುಹಾಕುವ ಕೆಲಸ ಮಾಡಬೇಕು ಎಂದು ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು.