ಬೆಂಗಳೂರು: ಸಕ್ಕರೆ ದರ (Sugar Price) ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸ್ವಾಗತಿಸಿದ್ದಾರೆ.
ಈ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಹಲವು ವರ್ಷಗಳಿಂದ ಸಕ್ಕರೆ ದರ ಹೆಚ್ಚಳವಾಗಿರಲಿಲ್ಲ. ಸಕ್ಕರೆ ದರ ಪ್ರತಿ ಕೆಜಿಗೆ 31 ರೂ. ಇತ್ತು. 41 ರೂಪಾಯಿಗೆ ಹೆಚ್ಚಳ ಮಾಡಲು ಮನವಿ ಮಾಡಿದ್ದೆವು. ಆದರೆ ಅವರು 40 ರೂ. ಮಾಡಲು ಚಿಂತನೆ ಮಾಡಿದ್ದಾರೆ, ನೋಡೋಣ ಎಂದರು. ಇದನ್ನೂ ಓದಿ: ಕೆಲವರಿಗೆ ಅಧಿಕಾರ ಮಾತ್ರ ಬೇಕು, ಅದಕ್ಕೆ ನಾವು ಏನು ಮಾಡೋದು: ಡಿಕೆಶಿ ಮಾರ್ಮಿಕ ಮಾತು
ಇನ್ನು ಡಿಸಿಎಂ ಡಿಕೆಶಿ ಕೂಡ ಪ್ರತಿಕ್ರಿಯಿಸಿದ್ದು, ದರ ನಿಗದಿ ಮಾಡೋದು, ಸಕ್ಕರೆ, ಮೊಲಾಸಸ್ ದರ ಎಲ್ಲಾ ನಿರ್ಧಾರ ಮಾಡೋದು ಕೆಂದ್ರದವರು. ಬಹಳ ಸಂತೋಷ ಪ್ರಹ್ಲಾದ್ ಜೋಶಿ ಅವರಿಗೂ ಬಿಸಿಯ ಅರಿವಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ಗಲಾಟೆ ಮಾಡಿದ್ದಾರೆ. ದರ ಹೆಚ್ಚಳ ಮಾಡಿ ಹತ್ತು ವರ್ಷವಾಗಿದೆ ಅಂತ ಗಲಾಟೆ ಮಾಡಿದ್ದಾರೆ. ಅದನ್ನ ಪ್ರಧಾನಿಗೆ ಮನವಿ ಮಾಡಿದ್ದೇವೆ. ರೈತರಿಗೂ ಒಳ್ಳೆಯದಾಗಬೇಕು, ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಒಳ್ಳೆಯದಾಗಬೇಕು. ರೈತರು ಇದ್ರೆ ಫ್ಯಾಕ್ಟರಿ, ಫ್ಯಾಕ್ಟರಿ ಇದ್ದರೆ ರೈತರು. ಉದ್ಯಮ ಕೂಡ ನಡೆಯಬೇಕು, ತೀರ್ಮಾನ ಮಾಡೋದು ಅವರು, ಹಾಗಾಗಿ ನಾವು ಒತ್ತಡ ಹಾಕಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ವೋಟ್ ಚೋರಿ ಆರೋಪ; ರಾಹುಲ್ ಗಾಂಧಿ ವಿರುದ್ಧ ನಿವೃತ್ತ ಅಧಿಕಾರಿಗಳ ಚಾಟಿ

