ಬೆಂಗಳೂರು: ಪಠ್ಯಪುಸ್ತಕ ಸಮಿತಿಯ ನೂತನ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನು ಕೈ ಬಿಡಲಾಗಿದೆ. ಇದರಿಂದ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ದಿಗ್ಗಜರೂ ಬಿಜೆಪಿ ಸರ್ಕಾರ ವಿರುದ್ಧ ಮುಗಿಬಿದ್ದಿದ್ದಾರೆ.
Advertisement
ಈ ಸಂಬಂಧ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಭಾರತ ನಿಂತಿರೋದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಮೇಲೆ. ಅದರಲ್ಲೇ ನಮಗೆ ಎಲ್ಲ ಹಕ್ಕು ಕೊಟ್ಟಿದ್ದಾರೆ. ಅದಕ್ಕಾಗಿ ಇಡೀ ದೇಶದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಇರುವಷ್ಟು ಯಾರದ್ದೂ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
Advertisement
Advertisement
ಕಳೆದ 75 ವರ್ಷದಿಂದ ಸಂವಿಧಾನವನ್ನು ಒಪ್ಪಿದ್ದೇವೆ. ಈಗ 6ನೇ ತರಗತಿ ಪಠ್ಯದಲ್ಲಿ ಅಂಬೇಡ್ಕರ್ ಬಗ್ಗೆ ಯಿದ್ದ ಪಠ್ಯವನ್ನು ತೆಗೆದಿದ್ದಾರೆ. 7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿಯನ್ನೇ ತೆಗೆದಿದ್ದಾರೆ. 9ನೇ ತರಗತಿ ಪುಸ್ತಕದಲ್ಲಿ `ಸಂವಿಧಾನ ಶಿಲ್ಪಿ’ ಎಂಬ ಬಿರುದನ್ನೇ ತೆಗೆದುಹಾಕಿದ್ದಾರೆ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ರೋಹಿತ್ ಚಕ್ರತೀರ್ಥ ಬಗ್ಗೆ ಮಾತನಾಡುವುದರಲ್ಲಿಯೂ ಅರ್ಥವಿಲ್ಲ. ಏಕೆಂದರೆ ಇದು ಸರ್ಕಾರದ ಬೇಜಾಬ್ದಾರಿ ಎಂದು ಕಿಡಿ ಕಾರಿದ್ದಾರೆ.
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅಂಬೇಡ್ಕರ್ ಬಗ್ಗೆ ಸಂವಿಧಾನ ಶಿಲ್ಪಿ ಎಂಬ ಸಾಲು ತೆಗೆದಿದ್ದಾರೆ. ಇದರಲ್ಲಿ ಪರಿಷ್ಕರಣೆ ಮಾಡಿರುವುದನ್ನು ಕೈಬಿಡಬೇಕು. ಈ ಹಿಂದೆ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಉಲ್ಲೇಖಿಸಿದ್ದನ್ನೇ ಮುಂದುವರೆಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರು ಅಬಕಾರಿ ಪೊಲೀಸರ ದಾಳಿ – 2.77 ಲಕ್ಷ ಮೌಲ್ಯದ ಮದ್ಯ ಜಪ್ತಿ
ಬಿಜೆಪಿ ಅವರಿಗೆ ಕೋಮು ನಶೆ ತಲೆಗೆ ಹತ್ತಿದೆ. ಅದರಿಂದ ಅವರು ಹೊರಗೆ ಬರಬೇಕು. ಸಂವಿಧಾನ ವಿರೋಧಿಗಳಿಗೆ ಅಧಿಕಾರ ಕೊಟ್ಟದ್ದೇ ತಪ್ಪು ಎನ್ನುವಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸಹ ಕಿಡಿ ಕಾರಿದ್ದಾರೆ. ಈಗಾಗಲೇ ಬಿಜೆಪಿ ತತ್ವಜ್ಞಾನಿಗಳ ಬರಹಗಳನ್ನ ಪಠ್ಯದಲ್ಲಿ ಕೈಬಿಟ್ಟಿದ್ದಾರೆ. ನಂತರ ದಲಿತ ಸಾಹಿತಿಗಳಿಗೆ ಅಪಮಾನ ಮಾಡಿ, ಇದೀಗ ಅಂಬೇಡ್ಕರ್ ಅವರಿಗೂ ಅಪಮಾನ ಮಾಡಿದ್ದಾರೆ. ಸಂವಿಧಾನ ಶಿಲ್ಪಿ ಅನ್ನೋದನ್ನೇ ಕೈಬಿಟ್ಟಿದ್ದು, ರಚನಾ ಸಮಿತಿ ಅಧ್ಯಕ್ಷರು ಅಂತ ಪುಸ್ತಕದಲ್ಲಿ ಸೇರಿಸಿದ್ದಾರೆ. ಇವರ ಐಡಿಯಾಲಜಿಗೆ ತಕ್ಕಂತೆ ಪುಸ್ತಕಗಳಲ್ಲಿ ಪಾಠ ಇಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನ ರಚನೆ ಹೇಗಾಯ್ತು ಅಂತಾ ಇವರಿಗೆ ಗೊತ್ತೇ ಇಲ್ವಾ? ಆದರೂ ಮನುಸ್ಮೃತಿಯನ್ನೇ ಸಂವಿಧಾನ ಅಂತಾರೆ. ಮೊದಲು ಅವರು ಇತಿಹಾಸ ಓದಿಕೊಳ್ಳಲಿ ಎಂದು ಕುಟಕಿದ್ದಾರೆ.