Connect with us

Bengaluru City

ಸಿದ್ದರಾಮಯ್ಯ ಹೊರಗಡೆ ಮಿಂಚ್ತಾರೆ, ಕಾಂಗ್ರೆಸ್‍ನಲ್ಲಿ ಮಿಂಚಲ್ಲ: ಈಶ್ವರಪ್ಪ ವ್ಯಂಗ್ಯ

Published

on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ, ಈಶ್ವರಪ್ಪದು ಡೆಡ್ಲಿ ಕಾಂಬಿನೇಶನ್. ಇಬ್ಬರಿಗೂ ರಾಜಕೀಯವಾಗಿ ಟಾಂಗ್ ಕೂಡುವುದು, ಸಿದ್ದರಾಮಯ್ಯರನ್ನ ಕಂಡರಂತೂ ಈಶ್ವರಪ್ಪ ಒಂದು ಹೆಜ್ಜೆ ಮುಂದೆ ಹೋಗಿ ವ್ಯಂಗ್ಯಭರಿತ ವಾಗ್ದಾಳಿ ನಡೆಸುತ್ತಾರೆ.

ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಯಡಿಯೂರಪ್ಪ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಿಂಚಿದ ಬಗ್ಗೆ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾಧ್ಯಮಗೋಷ್ಠಿ ನಡೆಸಿದ್ರು. ಯಡಿಯೂರಪ್ಪ ಬರ್ತ್‍ಡೇ  ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಿಂಚಿದ್ರು, ನೀವು ಇರಲಿಲ್ಲ ಎಂದಾಗ ಸಿದ್ದರಾಮಯ್ಯ ಬಗ್ಗೆ ಈಶ್ವರಪ್ಪ ವ್ಯಂಗ್ಯವಾಡಿದ್ರು. ಸಿದ್ದರಾಮಯ್ಯ ಹಂಗೆಲ್ಲಾ ಮಿಂಚ್ತಾರೆ, ನಿನ್ನೆ ಕಾರ್ಯಕ್ರಮದಲ್ಲೂ ಮಿಂಚಿದ್ದಾರೆ. ಹೊರಗಡೆಯಲ್ಲ ಸಿದ್ದರಾಮಯ್ಯ ಮಿಂಚ್ತಾರೆ. ಆದ್ರೆ ಕಾಂಗ್ರೆಸ್‍ನಲ್ಲಿ ಪಾಪ ಮಿಂಚಲ್ಲ ಅಂತಾ ವ್ಯಂಗ್ಯವಾಡಿದ್ರು.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮೂಲೆ ಗುಂಪಾಗಿದ್ದಾರೆ. ಹೋದಲ್ಲೆಲ್ಲಾ ಮಿಂಚ್ತಾರೆ. ಆದ್ರೆ ಕಾಂಗ್ರೆಸ್ ನಲ್ಲಿ ಮಿಂಚಲ್ಲ. ಮತ್ತೆ ಇದೀಗ ಕಾಂಗ್ರೆಸ್ ಗೆ ನಾಲ್ಕು ಕಾರ್ಯಾಧ್ಯಕ್ಷ ಸ್ಥಾನ ಮಾಡಿ ಕಾಂಗ್ರೆಸ್ ಒಡೆಯಲು ಹೊರಟಿದ್ದಾರೆ ಅಂತಾ ಸಿದ್ದರಾಮಯ್ಯ ಬಗ್ಗೆ ಈಶ್ವರಪ್ಪ ಲೇವಡಿ ಮಾಡಿದ್ರು.

ಇದೇ ವೇಳೆ ಯಡಿಯೂರಪ್ಪ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಗೈರು ಹಾಜರಾದ ಬಗ್ಗೆ ಸ್ಪಷ್ಟನೆ ನೀಡಿದ್ರು. ನಿನ್ನೆ ಬೆಳಿಗ್ಗೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಹುಟ್ಟುಹಬ್ಬ ಕಾರ್ಯಕ್ರಮ ನಿಮಿತ್ತ ಆರೋಗ್ಯ ಶಿಬಿರ ಇತ್ತು. ಯಡಿಯೂರಪ್ಪ ಅವರಿಗೆ ಉತ್ತಮ ಆಯುಷ್ಯ ,ಆರೋಗ್ಯ ಕೊಡಲಿ ಅಂತಾ ಹೋಮ, ಹವನ ಮಾಡಿದ್ದೇವೆ ಅದರಲ್ಲಿ ಪಾಲ್ಗೊಂಡಿದ್ದೇವೆ. ಕೆಲ ದೇವಾಲಯಗಳನ್ನ ಉದ್ಘಾಟನೆ ಮಾಡಿದ್ದೇವೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಹಾಗಾಗಿ ಬೆಂಗಳೂರು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ರು.

Click to comment

Leave a Reply

Your email address will not be published. Required fields are marked *