ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯರ ಹೆಗಲಿಗೆ 15 ಕ್ಷೇತ್ರಗಳ ಗೆಲುವಿನ ಹೊಣೆಯನ್ನು ನೀಡಲಾಗಿದೆ. ಈ ನಡುವೆ ಸಿದ್ದರಾಮಯ್ಯನವರ ವಿರುದ್ಧ ಸಿಡಿದ ಹಿರಿಯ ನಾಯಕರು ಚುನಾವಣೆಯಿಂದ ದೂರ ಉಳಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
15 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದೆ. ಉಳಿದ 7 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಗೆ ಹಿರಿಯ ನಾಯಕರು ಬಂದಿಲ್ಲ. ಎಲ್ಲವರು ನಮ್ಮವರೆ ಇರಬೇಕು ಎಂದುಕೊಂಡಿದ್ದ ಸಿದ್ದರಾಮಯ್ಯಗೆ ನಾಯಕರ ಈ ವರ್ತನೆ ಬಿಸಿ ಮುಟ್ಟಿಸಿದೆ. ಕೊನೆ ಹಳಿಗೆಯಲ್ಲಿ ಸೋಲಿನ ಹೊಣೆ ನಮಗೇಕೆ ಅಂತ ನಾಯಕರು ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ.
Advertisement
Advertisement
ತಮ್ಮ ಆಪ್ತರಿಗೆ ಸಿದ್ದರಾಮಯ್ಯನವರು ಟಿಕೆಟ್ ಕೊಡಿಸಿದ್ದಾರೆ. ಹಾಗಾಗಿ ಅವರೇ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಿ. ಏಳು ಕ್ಷೇತ್ರಗಳ ಟಿಕೆಟ್ ಹಂಚಿಕೆ ಸಭೆಯನ್ನ ಕಾಟಾಚಾರಕ್ಕೆ ಕರೆಯಲಾಗಿದೆ. ಅಲ್ಲಿಯೂ ಸಿದ್ದರಾಮಯ್ಯನವರು ತಮ್ಮವರಿಗೆ ಟಿಕೆಟ್ ಕೊಡಿಸಲು ಮುಂದಾಗುತ್ತಾರೆ. ಉಪಚುನಾವಣೆಯ ಉಸ್ತುವಾರಿಯೂ ಬೇಡ, ಪ್ರಚಾರವೂ ಬೇಡ. ಸೋಲು ಮತ್ತು ಗೆಲುವು ಎಲ್ಲದರ ಹೊಣೆಯನ್ನು ಸಿದ್ದರಾಮಯ್ಯನವರ ತೆಗೆದುಕೊಳ್ಳಲಿ ಎಂದು ಕೈ ನಾಯಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಅಂತ ಮೂಲಗಳು ತಿಳಿಸಿವೆ.