ಬೆಂಗಳೂರು: 136 ಶಾಸಕರ ಬೆಂಬಲ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಇಳಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಆದರೆ ಅದ ಸಾಧ್ಯವಿಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ (K.H.Muniyappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಒಂದು ಕ್ಷುಲ್ಲಕ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ತೆಗಿಬೇಕು ಅಂತಾ ಪಾದಯಾತ್ರೆ ಮಾಡ್ತಿದ್ದಾರೆ. ಪಾದಯಾತ್ರೆ ದೇಶದಲ್ಲಿ ಅಭಿವೃದ್ಧಿ ಕೆಲಸಕ್ಕೆ ಮಾಡಲಿ. ಕೇಂದ್ರದಲ್ಲಿ ಇವರನ್ನ ಸಚಿವರನ್ನಾಗಿ ಮಾಡಿದ್ದಾರೆ. ನಮ್ಮ ಕಡೆಯಿಂದ ನಾಲ್ಕು ಜನ ಸಚಿವರಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆ ಇವರು ಚಿಂತನೆ ಮಾಡ್ಬೇಕು ಎಂದು ರಾಜ್ಯದ ಕೇಂದ್ರ ಸಚಿವರಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ನನ್ನ, ಸಿಎಂ ನಡುವೆ ಮತಭೇದ ಇರಬಹುದು, ಮನಭೇದ ಇಲ್ಲ: ಬಿ.ಕೆ.ಹರಿಪ್ರಸಾದ್
Advertisement
Advertisement
ಜನಾದೇಶಕ್ಕೆ ನಾವು ಗೌರವ ಕೋಡೋಣ. 136 ಸೀಟ್ ಗೆದ್ದು ಜನಾದೇಶ ಪಡೆದಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ತೆಗಿಬೇಕು ಅಂತಾ ಚಿಂತನೆ ಮಾಡಿದ್ದಾರೆ. ಇದರ ವಿರುದ್ದವಾಗಿ ನಾಳೆ ಜನಾಂದೋಲನ ಕಾರ್ಯಕ್ರಮವನ್ನ ಬೃಹತ್ ಮಟ್ಟದಲ್ಲಿ ಮಾಡ್ತೀವಿ ಎಂದು ತಿಳಿಸಿದರು.
Advertisement
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶದ ಸರ್ಕಾರವನ್ನ ಯಾವುದೇ ಕಾರಣಕ್ಕೂ ಅವರು ಬದಲಾವಣೆ ಮಾಡೋದಕ್ಕೆ ನಾವು ಬಿಡೋದಿಲ್ಲ. ಸಿದ್ದರಾಮಯ್ಯ ಅವರಿಗೆ ಈ ಕೇಸ್‌ನಲ್ಲಿ ಯಾವುದೇ ಸಂಬಂಧ ಇಲ್ಲ. ಸಿಎಂ ಅವರು ಫೋನ್ ಮಾಡಿಲ್ಲ, ಪತ್ರ ಬರೆದಿಲ್ಲ. ಸೈಟ್ ಕೊಡಿ ಎಂದು ಕೇಳಿಲ್ಲ. ಇದಕ್ಕೆ ನಾವು ಕಮಿಟಿ ಮಾಡಿದ್ದೇವೆ. ಕಮಿಟಿ ತೀರ್ಮಾನ ಕೊಡ್ಲಿ. ಅದಕ್ಕೆ ನಾನು ಬದ್ದವಾಗಿರುತ್ತೇನೆ ಎಂದರು. ಇದನ್ನೂ ಓದಿ: MUDA Scam | ಸಿದ್ದರಾಮಯ್ಯ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲು
Advertisement
ಬಿಜೆಪಿಯವರು ರಾಜಕೀಯಕ್ಕೆ ಇದನ್ನು ಪ್ರಾರಂಭ ಮಾಡಿದ್ದಾರೆ. ದುರದೃಷ್ಟ ಕುಮಾರಣ್ಣ ಇದಕ್ಕೆ ಕೈ ಜೋಡಿಸಬಾರದಿತ್ತು, ಕೈ ಜೋಡಿಸಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಕೇಂದ್ರದಲ್ಲಿ ಬಹಳ ದೊಡ್ಡ ಜವಬ್ದಾರಿಯನ್ನ ಕೊಟ್ಟಿದ್ದಾರೆ. ಸಮಗ್ರ ಅಭಿವೃದ್ಧಿಗೆ ಅವರು ತೊಡಗಿಸಿಕೊಳ್ಳಬೇಕಿತ್ತು. ಅದರೂ ಅವರು ಇದೀಗ ಕೈ ಜೋಡಿಸಿರುವುದರಿಂದ ನಾವು ಹೋರಾಟ ಮಾಡಲೇಬೇಕು ಎಂದು ಸ್ಪಷ್ಟಪಡಿಸಿದರು.
ಈ ಸಂಬಂಧ ಕಮಿಟಿ ಮಾಡಿದ್ದೇವೆ. ಕಮಿಟಿಯಿಂದ ಏನು ತೀರ್ಮಾನ ಬರುತ್ತೋ ಅದಕ್ಕೆ ನಾವು ಬದ್ದವಾಗಿರುತ್ತೇವೆ. ಈ ಸಂದರ್ಭದಲ್ಲಿ ನಾನು ಬೇರೆ ಯಾವುದನ್ನೂ ಮಾತಾಡುವುದಿಲ್ಲ. ನಾನು ಆಪೀಲ್ ಮಾಡ್ತೀನಿ. ಒಳ್ಳೆ ಕೆಲಸಕ್ಕೆ ಹೋರಾಟ ಮಾಡ್ತೀವಿ. ಇಂತಹ ಸಣ್ಣ ಕೆಲಸಗಳಿಗೆ ಇಷ್ಟು ದೊಡ್ಡಮಟ್ಟದ ಪಾದಯಾತ್ರೆ ಮಾಡಬಾರದಿತ್ತು. ನಿಮ್ಮ ಎರಡು ಪಾರ್ಟಿ ತೇಜೋವಧೆ ಆಗ್ತಿದೆ. ಈ ಕೆಲಸ ಕೈಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಿ. ಜನಾದೇಶ ನಮಗೆ ಕೊಟ್ಟಿದೆ. ಸರ್ಕಾರ ನಾವು ನಡೆಸುತ್ತೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುರಿಯುತ್ತಾರೆ ಎಂದರು.