MUDA Scam| ಇವತ್ತು ಸಿಎಂ ಬ್ಯಾಕ್ ಟು ಬ್ಯಾಕ್ ಸಭೆ – ಒಂದೇ ಉದ್ದೇಶ, ಒಂದೇ ಸಂದೇಶ

Public TV
1 Min Read
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥವರ್‌ ಚಂದ್‌ ಗೆಹ್ಲೋಟ್‌ ಅನುಮತಿ ನೀಡಿದ ಬೆನ್ನಲ್ಲೇ ಸಿದ್ದರಾಮ್ಯ (Siddaramaiah) ಇಂದು ಎರಡು ಮಹತ್ವದ ಸಭೆ ನಡೆಸಲಿದ್ದಾರೆ.

ಹೌದು. ಇಂದು ಬೆಳಗ್ಗೆ 11ಗಂಟೆಗೆ ಸಚಿವ ಸಚಿವ ಸಂಪುಟ ಸಭೆ (Cabinet Meeting) ನಡೆಸಿದರೆ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆಯನ್ನು (CLP Meeting) ಕರೆದಿದ್ದಾರೆ. ಈಗಾಗಲೇ ಶಾಸಕರುಗಳಿಗೂ ಸಿಎಲ್‌ಪಿ ಕಾರ್ಯದರ್ಶಿ ಮಾಹಿತಿ ರವಾನಿಸಿದ್ದು ತಪ್ಪದೇ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ – ದರ್ಶನ್ A1 ಆರೋಪಿ? 

Congress CLP Meeting

ಈ ಸಭೆಯಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಗೆ ಕ್ಯಾಬಿನೆಟ್‌ನಲ್ಲಿ ಖಂಡನೆ ವ್ಯಕ್ತಪಡಿಸಿ ಪ್ರಕರಣದಲ್ಲಿ ಸಿಎಂ ಅವರನ್ನು ಬೆಂಬಲಿಸಲು ಶಾಸಕರಿಂದ ಒಕ್ಕೊರಲ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಅಗತ್ಯಬಿದ್ದರೇ ಮುಲಾಜಿಲ್ಲದೇ ಕುಮಾರಸ್ವಾಮಿ ಅರೆಸ್ಟ್‌ – ಸಿದ್ದರಾಮಯ್ಯ ವಾರ್ನಿಂಗ್‌

congress clp meeting 2

ಕೆಂದ್ರದ ಅಣತಿಯಂತೆ ರಾಜ್ಯಪಾಲರು ತನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಮುಡಾ ಪ್ರಕರಣದಲ್ಲಿ ತನ್ನ ಪಾತ್ರ ಏನು ಇಲ್ಲ ಎಂದು ಸಿಎಂ ಅವರು ಶಾಸಕರಿಗೆ ಮನವರಿಕೆ ಮಾಡಲಿದ್ದಾರೆ.

ಸಂದೇಶ ಯಾರಿಗೆ ?
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ಸಿಎಂ ಬಳಿ ಹೈಕಮಾಂಡ್‌ (Congress High Command) ವರದಿ ಕೇಳಿದೆ. ಈ ಸಂಬಂಧ ಶುಕ್ರವಾರ ಸಿಎಂ ದೆಹಲಿಗೆ ತೆರಳಿ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ, ಪಕ್ಷದೊಳಗಿನ ವಿದ್ಯಮಾನಗಳ ಬಗ್ಗೆ ವರದಿ ಸಲ್ಲಿಸಲಿದ್ದಾರೆ.

CLP Meeting

 

ಈಗಾಗಲೇ ಕಾಂಗ್ರೆಸ್ ಹೈಕಮಾಂಡ್‌ಗೆ ಸಚಿವರು, ಆಪ್ತರು ತನ್ನ ಜೊತೆ ಇದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ. ಈಗ ಶಾಸಕರ ಜೊತೆ ಸಭೆ ನಡೆಸುವ ಮೂಲಕ ಸಿಎಂ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರದ ಭಾಗವಾಗಿ ಒಳ-ಹೊರ ವಿರೋಧಿಗಳಿಗೆ ಸಿದ್ದರಾಮಯ್ಯ ಸಂದೇಶ ಕಳುಹಿಸಲೆಂದೇ ಈ ಸಭೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

 

Share This Article