ಬೆಂಗಳೂರು: ವಿಧಾನಸಭೆಯಲ್ಲಿ ನಡೆದ ಹೈಡ್ರಾಮಾ ವೇಳೆ ಅಸ್ವಸ್ಥರಾಗಿ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಗ್ಯವನ್ನು ಹಾಲಿ, ಮಾಜಿ ಸಿಎಂ ಸೇರಿದಂತೆ ಹಲವು ನಾಯಕರು ವಿಚಾರಿಸಿದರು.
ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯುಟಿ ಖಾದರ್, ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ್ದಾರೆ.
ಯತ್ನಾಳ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಯತ್ನಾಳ್ ಅವರು ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಸದ್ಯ ಅವರು ಸ್ಥಿರವಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಮನೆಗೆ ಕಳುಹಿಸಿ ಕೊಡುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ತಳ್ಳಾಟ ನೂಕಾಟದಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದ ಯತ್ನಾಳ್ – ಆಸ್ಪತ್ರೆಗೆ ರವಾನೆ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಯತ್ನಾಳ್ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸ್ಪೀಕರ್ ಚೇಂಬರ್ ಬಳಿ ಮಾರ್ಷಲ್‌ಗಳು ಅಮಾನುಷವಾಗಿ ನಡೆದುಕೊಂಡರು. ದೈಹಿಕವಾಗಿ ತಳ್ಳಾಟ ಮಾಡಿ, ಗಾಜುಗಳನ್ನು ಒಡೆದರು. ತಳ್ಳಾಟ ನೂಕಾಟ ಸುಮಾರು ಅರ್ಧ ಗಂಟೆ ನಡೆಯಿತು. ಸದ್ಯ ಯತ್ನಾಳ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗುರುವಾರ ಅವರನ್ನು ಡಾಕ್ಟರ್‌ಗಳು ಮನೆಗೆ ಕಳುಹಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಪೂರ್ಣ ಗುಣಮುಖನಾಗಿದ್ದು, ಭಯಪಡೋ ಅವಶ್ಯಕತೆಯಿಲ್ಲ: ಯತ್ನಾಳ್
Web Stories