ಉಡುಪಿ: ಉಳುವವನೇ ಭೂಮಿ ಒಡೆಯನಾಗಿದ್ದ. ಆದರೆ ಈಗ ಉಳ್ಳವರೇ ಭೂಮಿಯ ಒಡೆಯರಾಗಿದ್ದಾರೆ. ಉಳ್ಳವರ ಬೆಂಬಲಕ್ಕೆ ನಿಂತ ಸರ್ಕಾರವನ್ನು ಜನ ತಿರಸ್ಕರಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಉಡುಪಿ ಜಿಲ್ಲೆ ಹಿರಿಯಡ್ಕದಲ್ಲಿ ಭೂ ಸುಧಾರಣಾ ಕಾಯಿದೆ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆಯನ್ನು ಬಿಜೆಪಿಯವರು ನಾಶ ಮಾಡಿದರು. 79abc, sec 80 ,sec 63 ರದ್ದು ಮಾಡಿದ್ದು ಬಿಜೆಪಿಯಾಗಿದೆ. ಬಿಜೆಪಿ 15 -20 ಸಾವಿರ ಕೋಟಿ ರುಪಾಯಿ ಬೆಲೆಬಾಳುವ ಮೊಕದ್ದಮೆ ರದ್ಧು ಮಾಡಿದೆ. ಆಗ ಉಳುವವನೇ ಭೂಮಿ ಒಡೆಯ ಈಗ ಉಳ್ಳವರೇ ಭೂಮಿಯ ಒಡೆಯರಾಗಿದ್ದಾರೆ. ಉಳ್ಳವರ ಬೆಂಬಲಕ್ಕೆ ನಿಂತ ಸರ್ಕಾರವನ್ನು ಜನ ತಿರಸ್ಕರಿಸಬೇಕು. ಬಿಜೆಪಿ ಬೆವರು ಸುರಿಸಿ ದುಡಿಯುವವರ ವಿರುದ್ಧ ಇದೆ ಎಂದು ಆಡಳಿತ ಪಕ್ಷದ ವಿರುದ್ಧವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಕಲಿಸಿ: ಸಿದ್ದರಾಮಯ್ಯ
Advertisement
Advertisement
ರಾಜ್ಯದಲ್ಲಿ ವರ್ಗಾವಣೆ ದಂಧೆ ಮಿತಿಮೀರಿದೆ. ವರ್ಗಾವಣೆಗೆ ಹೋಟೆಲ್ ತಿಂಡಿ ರೀತಿ ಬೆಲೆ ನಿಗದಿಯಾಗಿದೆ. ಈ ಸರ್ಕಾರ 40 ಪರ್ಸಂಟೇಜ್ ಕೇಳುತ್ತಿದೆ. ಕಂಟ್ರಾಕ್ಟರ್ ಸ್ಟೇಟ್ ಅಸೋಸಿಯೇಷನ್ ಪ್ರಧಾನಿಗೆ ಮೋದಿ ಅವರಿಗೆ ಪತ್ರ ಬರೆದಿದೆ. ಮಾನ ಮರ್ಯಾದೆ ಇದ್ದವರು ಈ ಸರ್ಕಾರವನ್ನು ಒಪ್ಪಲು ಸಾಧ್ಯ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಮದರಸಾಗಳಲ್ಲಿ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡ್ತೇವೆ: ಬಿ.ಸಿ ನಾಗೇಶ್
Advertisement
ಕರಾವಳಿಯ ಜನ ಯೋಚನೆ ಮಾಡಬೇಕು. ಮೋದಿ ಅವರು 8 ವರ್ಷದಲ್ಲಿ 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರಾಜ್ಯದಲ್ಲಿ 5,18,000 ಕೋಟಿ ಸಾಲ ಇದೆ. ಒಂದೇ ವೇದಿಕೆ ಮೇಲೆ ಚರ್ಚೆಗೆ ಬನ್ನಿ ಬಿಜೆಪಿ ಅವರಿಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ