ಹುಬ್ಬಳ್ಳಿ: ಅತ್ಯಂತ ಕೆಳಮಟ್ಟದ ಕೆಲಸ ಮಾಡಿ ಸಚಿವ ಅಶ್ವಥ್ ನಾರಾಯಣ್ ಕ್ಷಮೆ ಕೇಳೋದರಲ್ಲಿ ಅರ್ಥವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ, ಆರ್ ಎಸ್ ಎಸ್ (RSS) ಮತ್ತು ಅಶ್ವಥ್ ನಾರಾಯಣ್ (Ashwath Narayan) ವಿರುದ್ಧ ಗುಡುಗಿದ ಅವರು, ಅಶ್ವಥ್ ನಾರಾಯಣ್ ಅವರದ್ದು ಆರ್‍ಎಸ್‍ಎಸ್ ಸಂಸ್ಕೃತಿ. ಕಡಿ ಹಿಡಿ ಹೊಡಿ, ಬಡಿ ಕೊಲೆ ಮಾಡುವ ಸಂಸ್ಕೃತಿ. ಗೋಡ್ಸೆ ಮೂಲಕ ಮಹಾತ್ಮ ಗಾಂಧಿಯವರನ್ನು ಕೊಲ್ಲಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ವಿಚಾರಗಳು ಚರ್ಚೆಯಾಗಬೇಕು. ಬಿಜೆಪಿ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಾರಿ ಟಿಪ್ಪು (Tippu Sultan) ಮತ್ತು ಸಾವರ್ಕರ್ ಅಂತ ಬರೆದು ಚುನಾವಣೆ ಮಾಡಲಿ. ಇದಕ್ಕೆ ಜನ ತೀರ್ಮಾನ ಮಾಡಲಿ ಎಂದರು.
Advertisement
Advertisement
ಒಬ್ಬ ರಾಜ್ಯ ಸರ್ಕಾರದ ಸಚಿವರಾಗಿ ರಾಜ್ಯದ ಜನರಿಗೆ ಭದ್ರತೆ ನೀಡಬೇಕು. ಟಿಪ್ಪು ಸುಲ್ತಾನ್ ಮುಗಿಸಿದ ರೀತಿಯಲ್ಲಿ ಸಿದ್ದರಾಮಯ್ಯ ಮುಗಿಸಿ ಅಂದ್ರೆ ಏನು ಅರ್ಥ..?. ಇದು ಅಪರಾಧ ಇದು ಪ್ರಚೋದನೆ. ಹೀಗಾಗಿ ಪೊಲೀಸರು ಸುಮೋಟೋ ಕೇಸ್ ದಾಖಲಿಸಕೊಳ್ಳಬೆಕು. ಇದಕ್ಕೆ ಪ್ರಧಾನಿ ಏನು ಹೇಳುತ್ತಾರೆ ನೋಡೋಣ. ಅಮಿತ್ ಶಾ ಹೇಳಲಿ ಇದು ಸರಿನಾ ತಪ್ಪಾ ಅಂತ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕುರಿತ ಹೇಳಿಕೆಗೆ ಅಶ್ವಥ್ ನಾರಾಯಣ್ ವಿಷಾದ
Advertisement
Advertisement
ನರಹಂತಕ ಅನ್ನೋದು ಬೇರೆ, ಮುಗಿಸು ಅನ್ನೋದು ಬೇರೆ. ಅದಕ್ಕೂ ಇದಕ್ಕೂ ವ್ಯತ್ಯಾಸವಿದೆ. ಅಶ್ವಥ್ ನಾರಾಯಣ್ ಅವರು ಅತ್ಯಂತ ಕೆಳಮಟ್ಟದ ಕೆಲಸ ಮಾಡಿ ಕ್ಷಮೆ ಕೇಳೋದರಲ್ಲಿ ಅರ್ಥವಿಲ್ಲ. ಅದಕ್ಕೆ ಹೇಳಿದೆ ನೀವೇ ಕೋವಿ ಹಿಡಿದು ಬಂದು ಕೊಲೆ ಮಾಡಿ ಅಂತಾ. ಇಂತಹ ಮನಸ್ಥಿತಿಯಿಂದ ಪ್ರಜಾಪ್ರಭುತ್ವ ಉಳಿಯೋದಿಲ್ಲ. ಈ ಚುನಾವಣೆಯಲ್ಲಿ ಸೋಲುತ್ತೆವೆ ಎಂಬ ಭಯದಿಂದ ಹೀಗೆ ಮಾಡಬೇಕು. ರಾಜ್ಯಪಾಲರು ಅಶ್ವಥ್ ನಾರಾಯಣ್ ವಜಾ ಮಾಡಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಆಗ್ರಹಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k