ಚಿಕ್ಕೋಡಿ: ದಯಮಾಡಿ ಬಿಜೆಪಿ (BJP) ಪಕ್ಷವನ್ನ ನಂಬಬೇಡಿ. ಅವರ ಹಿಂದುತ್ವ (Hindutva), ದೇವರು-ಧರ್ಮ ನಂಬೋಕೆ ಹೋಗಬೇಡಿ. ಜಾತಿ ನೋಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕೈ ಮುಗಿದು ಜನರಲ್ಲಿ ವಿನಂತಿ ಮಾಡಿದರು.
ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ (Congress) ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಪರ, ರೈತರ ಪರ, ದಲಿತರ ಪರ, ಅಲ್ಪಸಂಖ್ಯಾತರ ಪರ ಇರುವಂಥ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಬಿಜೆಪಿ ಕೇಸರಿ ಬಟ್ಟೆಯನ್ನಿಟ್ಟುಕೊಂಡು ಅದರ ಪಾವಿತ್ರ್ಯತೆ ಹಾಳು ಮಾಡುತ್ತಿದೆ: ಹೆಚ್‌ಡಿಕೆ
ಕಾಂಗ್ರೆಸ್ ಜನರಿಗೆ ಸುಳ್ಳು ಹೇಳಿ ಮೋಸ ಮಾಡುವ ಪಕ್ಷ ಅಲ್ಲ. ಯಾವ್ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೋ ಆಗ ಬಡವರು, ಹಿಂದುಳಿದವರು, ದಲಿತರು, ಮಹಿಳೆಯರ ಪರವಾಗಿ ಕಾರ್ಯಕ್ರಮ ನೀಡಿದೆ. ಆರ್ಥಿಕ, ಸಮಾಜಿಕ ಪ್ರಗತಿಗೆ ಕೊಡುಗೆ ಕೊಟ್ಟಿದೆ. 2013 ರಲ್ಲಿ ಜನರ ಮುಂದೆ ಒಂದು ಪ್ರಣಾಳಿಕೆ ಇಟ್ಟಿದ್ದೆವು. ಬಸವಣ್ಣನವರ ಜಯಂತಿ ದಿನದಂತೆ ಅವತ್ತು ಘೋಷಣೆ ಮಾಡಿದೆವು. ಪ್ರಣಾಳಿಕೆ ಒಳಗಿನ ಭರವಸೆಗಳನ್ನು ಜಾರಿಗೆ ತರುವಲ್ಲಿ ನಾವು ಭರವಸೆ ಈಡೇರಿಸಿದೆವು. ಬಿಜೆಪಿಯವರು ಕೋಟ್ಯಾಂತರ ರೂ. ಖರ್ಚು ಮಾಡಿ ಶಾಸಕರನ್ನು ಕೊಂಡುಕೊಂಡು ಅನೈತಿಕವಾಗಿ ಅಧಿಕಾರಕ್ಕೆ ಬಂದರು. ಕಳೆದ ಚುನಾವಣೆಯಲ್ಲಿ 113 ಸ್ಥಾನ ಬಂದಿರಲಿಲ್ಲ, ಕೇವಲ 104 ಮಾತ್ರ ಬಂತು. ಅದರ ಅರ್ಥ ಜನರ ಅಶೀರ್ವಾದ ಅವರಿಗೆ ಇರಲಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್‌ನಿಂದ 14 ಶಾಸಕರನ್ನು ಜೆಡಿಎಸ್‌ನಿಂದ 3 ಶಾಸಕರನ್ನು ಕೊಂಡುಕೊಂಡು ಬಿಜೆಪಿಯವರು ಸರ್ಕಾರ ಮಾಡಿದ್ರು. ಇವರಿಗೆ ನೈತಿಕತೆ ಇದೆಯಾ? ಅಧಿಕಾರಕ್ಕೆ ಬಂದ ಮೇಲೆ ಲೂಟಿ ಹೊಡೆಯಲು ನಿರತರಾದರು. 2018 ರಲ್ಲಿ 600 ಭರವಸೆಯನ್ನು ಬಿಜೆಪಿಯವರು ನೀಡಿದ್ದರು. ಇಲ್ಲಿಯವರೆಗೆ 10 ಪರ್ಸೆಂಟ್ ಸಹ ಭರವಸೆ ಈಡೇರಿಸಲು ಆಗಲಿಲ್ಲ. ನಾವು ಅಧಿಕಾರಕ್ಕೆ ಬಂದ್ರೆ ಸೊಸೈಟಿ ಸಾಲ 1 ಲಕ್ಷದವರೆಗೂ ಮನ್ನಾ ಮಾಡ್ತೀವಿ ಅಂತ ಹೇಳಿದ್ರು, ಮನ್ನಾ ಮಾಡಿದ್ರಾ? ಮನಮೋಹನ್ ಸಿಂಗ್ ಅವರು 78 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ರು. ಬಸವರಾಜ ಬೊಮ್ಮಾಯಿ, ಮೋದಿಯವರೇ ಒಂದು ರೂಪಾಯಿ ಮನ್ನಾ ಮಾಡಿದ್ರೇನ್ರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನನ್ನ ರಕ್ತನೇ ಕಾಂಗ್ರೆಸ್, ನಾನು ‘ಕೈ’ ಪಕ್ಷ ಸೇರುತ್ತೇನೆ: ಹೆಚ್. ವಿಶ್ವನಾಥ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k