ಬೆಳಗಾವಿ: ಸುವರ್ಣ ಸೌಧದ(Suvarna Soudha) ಕಾರಿಡಾರ್‌ನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್(Basanagouda Patil) ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಇತಿಹಾಸದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಕಾರಿಡಾರ್‌ನಲ್ಲಿ ಯತ್ನಾಳ್ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಸಿದ್ದರಾಮಯ್ಯ, ಏಯ್ ಯತ್ನಾಳ್ ಎಂದಿದ್ದಾರೆ. ಇದಕ್ಕೆ ಯತ್ನಾಳ್, ಸಾಹೇಬ್ರೆ ನಮಸ್ಕಾರ ಎಂದು ಹೇಳಿ ನಾನು ನಿಮ್ಮ ಬಗ್ಗೆಯೇ ಮಾತನಾಡುತ್ತಿದ್ದೆ ಎಂದು ಉತ್ತರ ನೀಡಿದರು. ಇದನ್ನೂ ಓದಿ: ನಾವು ಹಿಂದೂಗಳೇ – ಹುಟ್ಟಿದ್ದು ಹಿಂದೂವಾಗಿ ಸಾಯುವುದು ಹಿಂದೂವಾಗಿಯೇ: ಡಿಕೆಶಿ
Advertisement
Advertisement
ಸಿದ್ದರಾಮಯ್ಯ, ನೀವು ನನ್ನ ಬಗ್ಗೆನೇ ಮಾತನಾಡಬೇಕು. ಟಿಪ್ಪು, ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ ಹೋರಾಟಗಾರರು ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಯತ್ನಾಳ್, ಹೌದು. ಚೆನ್ನಮ್ಮ, ರಾಯಣ್ಣ ಪ್ರತಿಮೆಯನ್ನು ಸುವರ್ಣ ಸೌಧದಲ್ಲಿ ನಿರ್ಮಾಣ ಮಾಡುತ್ತೇವ ಎಂದು ಮರು ಉತ್ತರ ನೀಡಿದರು.
Advertisement
ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ರಾಷ್ಟ್ರೀಯ ನಾಯಕರ ಫೋಟೋ ಇಡಬೇಕು. ದಾರ್ಶನಿಕರ ಫೋಟೊ ಇಡಬೇಕು. ನಾವು ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡುತ್ತೇವೆ. ಆ ಕಾರಣಕ್ಕೆ ಇವರು ವಿಷಯಾಂತರ ಮಾಡಲು ಈ ವಿಚಾರವನ್ನು ಎತ್ತಿದ್ದಾರೆ. ನಾವು ಸಾವರ್ಕರ್ ಫೋಟೋವನ್ನು ವಿರೋಧ ಮಾಡುತ್ತಿಲ್ಲ. ಅವರ ಜೊತೆ ಈ ಎಲ್ಲಾ ಮಹನೀಯರ ಫೋಟೋವನ್ನು ಹಾಕಬೇಕು ಎಂದು ಆಗ್ರಹಿಸಿದರು.