ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಇಂದು ಎಚ್‍ಡಿ ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಬಳಿಕ ನಡೆದ ಫೋಟೋ ಸೇಷನ್ ನಿಂದ ದೂರವುಳಿದರು.
Advertisement
ಮಹಾಮೈತ್ರಿ ಕೂಟದ ಭಾಗವಾಗಿ ಕಂಡ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾವಹಿಸಿದ್ದ ಹಲವು ನಾಯಕರು ಚಹಾ ಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಚ್ಚರಿಯಾಗಿ ಕಂಡ ರಾಜ್ಯ ಕಾಂಗ್ರೆಸ್ ನಾಯಕರು ವಿಧಾನಸೌಧದ ಬಳಿಯ ಖಾಸಗಿ ಹೋಟೆಲ್‍ಗೆ ತೆರಳಿ ತಿಂಡಿ ಜೊತೆ ಗರಂ ಗರಂ ಚಹಾ ಕುಡಿದಿದ್ದಾರೆ. ರಮೇಶ್ ಕುಮಾರ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜನ್ ಖರ್ಗೆ ತೆರಳಿದ್ದರು.
Advertisement
ಎಚ್‍ಡಿಕೆ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಸೈಡ್ ಲೈನ್ ಮಾಡಲಾಗಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಚುನಾವಣೆಯ ವೇಳೆ ರಾಹುಲ್ ಗಾಂಧಿ ಅವರಿಗೆ ಹೆಚ್ಚು ಆತ್ಮೀಯಾರಗಿದ್ದ ಸಿದ್ದರಾಮಯ್ಯ ಏಕಾಂಗಿಯಾದ್ರ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಸಿದ್ದರಾಮಯ್ಯ ಅವರು ಸ್ವತಃ ಫೋಟೋ ಶೂಟ್ ನಿಂದ ಹಿಂದೆ ಸರಿದಿದ್ದರು. ಆದರೆ ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯ ಇದನ್ನು ನಿರಾಕರಿಸಿದೆ.
Advertisement
Went to Janaradhana hotel with Shri @siddaramaiah, Shri @MallikarjunINC & other senior leaders of the Congress after attending the swearing-in ceremony at Vidhana Soudha. pic.twitter.com/G3SgMvCjrA
— DK Shivakumar (@DKShivakumar) May 23, 2018