ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿವಾಸದಲ್ಲಿ ರಾಜ್ಯದ ಆಯ್ದ ಪ್ರಮುಖ 15 ನಾಯಕರ ಸಭೆ ಹಿನ್ನಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ಪ್ರವಾಸ ಕೈಗೊಂಡಿದ್ದಾರೆ.
ಇಂದು ನಡೆಯುವ ಸಭೆಯು ರಾಜ್ಯದ ಮುಂದಿನ ಕೈ ನಾಯಕತ್ವದ ದಿಕ್ಸೂಚಿ ಆಗುವ ಸಾಧ್ಯತೆ ಇದೆ. ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಮುಕ್ತ ಅಭಿಪ್ರಾಯಗಳೆರಡೂ ನಿರ್ಣಾಯ ಎನ್ನಲಾಗಿದೆ.
ರಾಜ್ಯದಲ್ಲಿ ಪಕ್ಷ ಸಂಘಟನೆ, ಮುಂದಿನ ಹೋರಾಟ, ನಾಯಕತ್ವ, ನಾಯಕತ್ವದಲ್ಲಿನ ಸಮಸ್ಯೆ, ಮುಂಬರುವ ಚುನಾವಣೆ ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಮುಕ್ತ ಚರ್ಚೆ ನಡೆಯಲಿದೆ. ರಾಜ್ಯದ ನಾಯಕರ ನಡುವಿನ ಸಮನ್ವಯದ ಕೊರತೆಯಿದೆ ಎನ್ನಲಾಗುತ್ತಿದ್ದು, ಮುಂದೆ ಹೇಗೆ ಚುನಾವಣಾ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆಯು ಮುಕ್ತವಾದ ಚರ್ಚೆ ನಡೆಯಲಿದೆ. ಇದನ್ನೂ ಓದಿ: ಮುಸ್ಲಿಂ ಅವರು ಸತ್ತಿದ್ರೆ ರಾಹುಲ್, ಸೋನಿಯಾ ಗಾಂಧಿ ಬರ್ತಿದ್ರು: ಯತ್ನಾಳ್
ರಾಜ್ಯದ ಪ್ರಮುಖ 15 ನಾಯಕರ ಜೊತೆಗಿನ ಚರ್ಚೆ ಸಹಜವಾಗಿಯೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಾಯಕತ್ವದ ಪರಮರ್ಶೆಗೆ ವೇದಿಕೆಯಾಗಲಿದೆ ಎನ್ನಲಾಗುತ್ತಿದೆ. ಅಧಿಕೃತವಲ್ಲದಿದ್ದರೂ ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್‍ನ ನಾಯಕತ್ವ ಯಾರ ನೇತೃತ್ವದಲ್ಲಿ ಸಾಗಲಿದೆ ಎಂಬ ಸಂದೇಶ ರವಾನೆಯಾಗುವ ಸಾಧ್ಯತೆ ಇದೆ. ಇಂದಿನ ಸಭೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರಿಗೂ ನಾಯಕತ್ವದ ಸತ್ವ ಪರೀಕ್ಷೆಯ ಸಭೆ ಎಂದೇ ರಾಜ್ಯ ಕೈ ಪಾಳಯದಲ್ಲಿ ಜೋರಾಗಿ ಕೇಳಿ ಬರುತ್ತಿರುವ ಮಾತಾಗಿದೆ. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ – ಹಿಂದೂಗಳಿಗೆ ಮುಸ್ಲಿಂ ಸಹೋದರರ ಸಾಂತ್ವನ