ಬೆಂಗಳೂರು: ಹಿಜಬ್, ಹಲಾಲ್ ಬಗ್ಗೆ ಕಾಂಗ್ರೆಸ್‌ಗೆ ಮಾತನಾಡಲು ತಾಕತ್ತು ಇಲ್ಲ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಗೋ ಹತ್ಯೆ ಬಿಲ್ ಜೊತೆ ಹೋದವರು ಯಾರು? ಮತಾಂತರ ನಿಷೇಧ ಕಾಯ್ದೆ ಜೊತೆಗೆ ಹೋದವರು ಯಾರು ಎಂದು ಹೆಚ್‌ಡಿಕೆ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಚ್ಚೇ ದಿನ್ ಕೊಡ್ತೀವಿ ಎಂದ ಕೇಂದ್ರ ನರಕ ದಿನ ತೋರಿಸುತ್ತಿದೆ: ಡಿಕೆಶಿ
Advertisement
Advertisement
ಜಾತ್ಯತೀತ ಪರಿಕಲ್ಪನೆಗೆ ಬದ್ಧರಾಗಿರುವವರು ನಾವು. ಸಂವಿಧಾನದ ಜೊತೆಗೆ ಹೋಗುವವರು ನಾವು. ಹಿಜಬ್, ಹಲಾಲ್ ಏನೇ ಇರಲಿ, ಸಂವಿಧಾನದ ಜೊತೆಗೆ ನಾವು ಹೋಗುತ್ತೇವೆ. ರಕ್ಷಣೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
Advertisement
ಡಿ.ಕೆ.ಶಿವಕುಮಾರ್ ಮಾತನಾಡಿ, ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆಗೆ ಓಟು ಒತ್ತಿದ್ರಲ್ಲಾ ಅದು ಮುಖ್ಯ. ಸುಮ್ನೆ ಭಾಷಣ ಮಾಡೋದಲ್ಲ. ಕುಮಾರಸ್ವಾಮಿ ದೊಡ್ಡವರು, ಅವರಿಗೆ ಬಹಳ ಶಕ್ತಿ ಇದೆ. ಅವರ ತಾಕತ್ತು ಅವರಿಗೆ, ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ನಯವಾಗಿ ತಿವಿದಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಮುಚ್ಚಿಹಾಕಲು ಹಲಾಲ್ ತರ್ತಾರೆ: ಸಿದ್ದರಾಮಯ್ಯ ಕಿಡಿ
Advertisement
ಈ ನಡುವೆ ಹಲಾಲ್ ವಿವಾದ ವಿಚಾರವಾಗಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಬೆಲೆ ಏರಿಕೆ ವಿಚಾರ ಮುಚ್ಚಿ ಹಾಕಲು ಕೋಮುವಾದಿ ವಿಷಯ ತರ್ತಾರೆ. ಅದಕ್ಕಾಗಿಯೇ ಹಿಜಬ್, ಹಲಾಲ್, ಮುಸ್ಲಿಂ ವ್ಯಾಪಾರ ನಿರ್ಬಂಧ, ಕಾಶ್ಮೀರ್ ಫೈಲ್ಸ್ ಸಿನಿಮಾ ತೋರಿಸೋದು. ನಿಮಗೆ ಮನುಷ್ಯತ್ವ ಇದೆಯಾ? ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.