– ಕಾಂಗ್ರೆಸ್‌ನಿಂದಲೇ ನನಗೆ ಕೋಟಿ ಕೋಟಿ ಆಫರ್ ಬಂದಿತ್ತು
– ಸಿದ್ದರಾಮಯ್ಯಗೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ರೆ ನನ್ನ ವರದಿಯನ್ನ ಸಿಬಿಐ ತನಿಖೆಗೆ ಹಸ್ತಾಂತರಿಸಲಿ
ಮಂಗಳೂರು: ವಕ್ಫ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ವಿಜಯೇಂದ್ರ ಅವರು 150 ಕೋಟಿ ಆಫರ್ ಮಾಡಿದ್ದರೆಂಬ ಸಿಎಂ ಸಿದ್ದರಾಮಯ್ಯ ಆರೋಪ ಸುಳ್ಳು ಎಂದು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ (Anwar Manippady) ಸ್ಪಷ್ಟಪಡಿಸಿದ್ದಾರೆ.
Advertisement
‘ಪಬ್ಲಿಕ್ ಟಿವಿ’ ಮಾತನಾಡಿದ ಅವರು, ಈ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ನವರೇ ಕೋಟಿ ಕೋಟಿ ಲಂಚ ನೀಡುವ ಆಫರ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಹರಕೆ ಸೀರೆ ಕಳ್ಳತನ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್
Advertisement
Advertisement
ಸಿಎಂ ಸಿದ್ದರಾಮಯ್ಯನವರು ಇದೀಗ ಮಾಡಿದ ಆರೋಪ ಸುಳ್ಳು. ವಿಜಯೇಂದ್ರ ಯಾವುದೇ ರೀತಿಯ ಹಣದ ಬೇಡಿಕೆ ನೀಡಿಲ್ಲ. ಸರ್ಕಾರ ತನಿಖೆ ಮಾಡಬೇಕೆಂದು ವಿಜಯೇಂದ್ರ ಅವರನ್ನು (ಯಡಿಯೂರಪ್ಪ ಸಿಎಂ ಆಗಿದ್ದಾಗ) ಒತ್ತಾಯಿಸಿದ್ದೆ. ಆದರೆ, ಹಣದ ಬೇಡಿಕೆ ಇಟ್ಟಿಲ್ಲ. ಈ ವರದಿಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಎಲ್ಲರ ವಿರುದ್ಧ ಕಿಡಿಕಾರಿದ್ದು ಸತ್ಯ. ಇದೀಗ ಸಿಎಂ ಸಿದ್ದರಾಮಯ್ಯನವರು ಹೇಳಿದ ರೀತಿ ಸಿಬಿಐಗೆ ವಹಿಸಲಿ ಎಲ್ಲವೂ ಹೊರ ಬರುತ್ತೆ ಎಂದಿದ್ದಾರೆ.
Advertisement
ವಕ್ಫ್ ವರದಿಯನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ನವರೇ ನನಗೆ ಹಣದ ಆಮಿಷ ಒಡ್ಡಿದ್ದರು. 2012ರಿಂದಲೂ ಶುರು ಮಾಡಿ ಮರ‍್ನಾಲ್ಕು ವರ್ಷಗಳಿಂದ ಆಫರ್ ನೀಡುತ್ತಾ ಬಂದಿದ್ದರು. ನಾನು ಬೈದು ಕಳುಹಿಸಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ರಾಜಕೀಯ ಬಿಟ್ಟರೆ ಬೇರೇನು ಬೇಕಿಲ್ಲ: ಡಿಕೆಶಿ ವಾಗ್ದಾಳಿ
ಪ್ರಧಾನ ಮಂತ್ರಿಗಳಿಗೂ ವರದಿ ಸಂಬಂಧ ಬಹಳಷ್ಟು ಪತ್ರಗಳನ್ನು ಬರೆದಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿ ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ಕೇಳಿಕೊಂಡಿದ್ದೆ ಎಂದು ತಿಳಿಸಿದ್ದಾರೆ.
ನಮ್ಮ ವಕ್ಫ್ನ ಒಟ್ಟು ಆಸ್ತಿ 50 ಸಾವಿರ ಎಕರೆ ಇದ್ದಾಗ, ಅದರಲ್ಲಿ 27-28 ಸಾವಿರ ಎಕರೆ ಕಬಳಿಕೆ ಆಗಿ ಬಾಕಿ ಉಳಿದಿದ್ದು 23 ಸಾವಿರ ಎಕರೆ. ಆಗ ಸಿದ್ದರಾಮಯ್ಯ ಅವರು 1,60,000 ಎಕರೆಗೆ ನೋಟಿಸ್ ಕೊಡ್ತಾರೆ ಬೇರೆ ಬೇರೆ ರೈತರಿಗೆ. ಇದು ಯಾಕೆ? ಇದು ಮುಸ್ಲಿಂ ಮತ್ತು ಹಿಂದೂಗಳ ನಡುವೆ ಕಿಡಿ ಹೊತ್ತಿಸಿದ್ದು, ಅವರಿಬ್ಬರು ಹೊಡೆದಾಡಿಕೊಳ್ಳಲಿ ಅಂತಾ. ಅವರು ಅಷ್ಟು ಸತ್ಯವಂತರಾಗಿದ್ದರೆ ಒಮ್ಮೆ ನೋಟಿಸ್ ಕೊಟ್ಟವರು ಹಿಂದಕ್ಕೆ ಯಾಕೆ ಪಡೆದುಕೊಳ್ತಾರೆ? ಕೇವಲ 23-24 ಸಾವಿರ ಎಕರೆ ಇರಬೇಕಾದರೆ, 1,60,000 ಎಕರೆಗೆ ಹೇಗೆ ನೋಟಿಸ್ ಕೊಟ್ಟರು ಎಂದು ಮಾಣಿಪ್ಪಾಡಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ, ಆ ಸಮುದಾಯಕ್ಕೆ ಏನಾದರು ಮಾಡಬೇಕೆಂಬ ಮನಸ್ಸಿದರೆ ನಾನು ಕೊಟ್ಟ ವರದಿಯನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಉತ್ತರಾಧಿಕಾರಿಯಾಗಿ ಸನ್ಯಾಸತ್ವ ಸ್ವೀಕರಿಸಿದ ಕೆಎಎಸ್ ಅಧಿಕಾರಿ
ಕಾಂಗ್ರೆಸ್‌ನಲ್ಲಿರುವ ಮುಸ್ಲಿಂ ನಾಯಕರು ಸೇರಿ ಬಹಳಷ್ಟು ಮಂದಿ ವಕ್ಫ್ ಆಸ್ತಿಯನ್ನು ಲೂಟಿ ಮಾಡಿದ್ದಾರೆ. ಅದನ್ನು ಮುಚ್ಚಿ ಹಾಕಲು ತೋಳು ಬಲ ಮತ್ತು ಹಣದ ಬಲದಿಂದ ಸಾಕಷ್ಟು ಪ್ರಯತ್ನ ಮಾಡಿದರು. ನನಗೆ ಕಿರುಕುಳವನ್ನೂ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.