ಬೆಂಗಳೂರು: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಒಂದೇ ದಿನ ಇದ್ದು, ದಾವಣಗೆರೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 50 ಎಕರೆ ವಿಸ್ತಾರವಾದ ಶಾಮನೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ಅರಮನೆ ಮಾದರಿಯ ಬೃಹತ್ ವೇದಿಕೆ ಸಿದ್ಧವಾಗಿದೆ. ವೇದಿಕೆಯ ಮೇಲೆ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಖರ್ಗೆ ಸೇರಿದಂತೆ ಕೇವಲ 45 ಜನ ಮುಖ್ಯ ಗಣ್ಯರಿಗೆ ಕೂರಲು ಅವಕಾಶ ನೀಡಲಾಗಿದೆ. ಹಾಗೆಯೇ ವೇದಿಕೆ ಮುಂಭಾಗದಲ್ಲಿ 6 ಲಕ್ಷ ಜನರಿಗೆ ಆಸನಗಳು ಸಜ್ಜಾಗಿವೆ. ಮಾಜಿ ಸಚಿವರು, ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.
Advertisement
Advertisement
ಸಿದ್ದರಾಮಯ್ಯನವರ 75 ವರ್ಷಗಳ ಕಾಲ ನಡೆದು ಬಂದ ಹಾದಿಯ ಬಗ್ಗೆ ಜನರಿಗೆ ತಿಳಿಸಲು ಛಾಯಾಚಿತ್ರ ಪ್ರದರ್ಶನವನ್ನು ಕೂಡ ಆಯೋಜನೆ ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯ ಬಾಸ್ ಎಂದು ಚಿನ್ನದಲ್ಲಿ ಬರೆಸಿ ಸಿದ್ದರಾಮಯ್ಯಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ಎಕ್ಸ್ ಸಿಎಂ ಎಂದು ಬರೆಸಬೇಕಿತ್ತು ಸಿದ್ದು ಅಭಿಮಾನಿಗೆ ತಿಳಿಸಿದ್ದಾರೆ.
Advertisement
Advertisement
ಸಿದ್ದರಾಮೋತ್ಸವಕ್ಕೆ ಹೋಗುವವರಿಗೆ ಅಭಿಮಾನಿಗಳನ್ನು ಕರೆದೊಯ್ಯಲು ಈಗಾಗಲೇ ವಿವಿಧ ಜಿಲ್ಲೆಗಳಿಂದ ಸುಮಾರು 7 ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ 200 ಕಾರು, 100 ಆಟೋಗಳಿಗೆ ರಕ್ಷಾರಾಮಯ್ಯ ಚಾಲನೆ ನೀಡಿದ್ದಾರೆ. ಇಂದು ಸಂಜೆ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದು. ಹುಬ್ಬಳ್ಳಿಗೆ ಸಂಜೆ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಖಾಸಗಿ ಹೋಟೆಲ್‌ಗೆ ತೆರಳುವ ರಾಹುಲ್, ಮೊದಲ ಬಾರಿಗೆ ಕಾರ್ಯಕರ್ತರು ಮತ್ತು ಮುಖಂಡರ ಜೊತೆಗೆ ಚುನಾವಣೆ ಸಂಬಂಧಿತ ಐತಿಹಾಸಿಕ ಸಭೆ ನಡೆಸಲಿದ್ದಾರೆ. ಬಳಿಕ ರಾತ್ರಿ ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಮಾಡಿ ಬೆಳಗ್ಗೆ ಚಿತ್ರದುರ್ಗದ ಕಡೆ ತೆರಳಲಿದ್ದಾರೆ ಎಂದು ಸಿದ್ದರಾಮಯ್ಯ ಅಮೃತಮಹೋತ್ಸವ ಸಮಿತಿ ಮಾಹಿತಿ ನೀಡಿದೆ.