ಬೆಂಗಳೂರು: ಗಣ್ಯರ ಜಯಂತಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯನ್ನು ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಈ ಬಗ್ಗೆ ಅರೋಪಿಸಿ, ಸೂಕ್ತ ತನಿಖೆ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಮರಿಲಿಂಗಗೌಡ ಪಾಟೀಲ್ ಅನ್ಮೋರಿ ಎಂಬವರು ಕೋಟ್ಯಂತರ ರೂ. ವೆಚ್ಚದಲ್ಲಿ ಆಚರಿಸಿದ ವಿವಿಧ ಜಯಂತಿಗಳ ಬಗ್ಗೆ ಮಾಹಿತಿ ಕೊಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಗಳ ವಿರುದ್ಧ ದೂರು ನೀಡಿದ್ದಾರೆ.
Advertisement
Advertisement
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಹಲವಾರು ಗಣ್ಯರ ಜಯಂತಿ ಹೆಸರಲ್ಲಿ ಬರೋಬ್ಬರಿ 17 ಕೋಟಿ 65 ಲಕ್ಷ ರೂನ್ನು ಖರ್ಚು ಮಾಡಲಾಗಿದೆ. ಅನೇಕರ ಹೆಸರೇ ಗೊತ್ತಿಲ್ಲದ ಜಯಂತಿ ಆಚರಣೆ ಮಾಡಿದ್ದೇವೆ ಎಂದು ಅಧಿಕಾರಿಗಳು ಹಣ ಬಿಡುಗಡೆ ಮಾಡಿದ್ದಾರೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಿದ್ದೇವೆ ಎಂದು ದಾಖಲೆಯಲ್ಲಿ ತೋರಿಸಿದ್ದಾರೆ. ಆದರೆ ನಿಜವಾಗಿಯೂ ಈ ಜಯಂತಿ ಆಚರಣೆಗಳು ನಡೆದಿವೆಯಾ? ಯಾವಾಗ ಆಚರಣೆ ಮಾಡಿದ್ದಾರೆ? ಯಾರು ಅತಿಥಿಯಾಗಿದ್ರು? ಎಲ್ಲಿ ಆಚರಣೆ ಮಾಡಿದ್ದಾರೆ? ಎಂಬುವುದರ ಬಗ್ಗೆ ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
Advertisement
2013 ರಿಂದ 2018 ವರೆಗೆ ನಡೆದ ವಿವಿಧ ಗಣ್ಯರ ಜಯಂತಿಗಳ ದಾಖಲೆ ಸಂಗ್ರಹಿಸಿದ ಆರ್ ಟಿ ಐ ಕಾರ್ಯಕರ್ತ ಮರಿಲಿಂಗಗೌಡ ಪಾಟೀಲ್ ಅನ್ಮೋರಿ, ಬೆರಳೆಣಿಕೆಯಷ್ಟು ಜಯಂತಿಗಳ ಆಚರಣೆ ಮಾತ್ರ ನೋಡಿದ್ದೇವೆ. ಕೆಲ ಅಧಿಕಾರಿಗಳು ಜಯಂತಿ ಮಾಡದೆ ಸುಳ್ಳು ದಾಖಲೆ ನೀಡಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement
ಯಾವ ಜಯಂತಿಗೆ ಎಷ್ಟು ಖರ್ಚು?:
1. ದೇವರ ದಾಸಿಮಯ್ಯ ಜಯಂತಿ – 69 ಲಕ್ಷ
2. ಭಗವಾನ್ ಮಹವೀರ್ ಜಯಂತಿ – 69 ಲಕ್ಷ
3. ಅಕ್ಕಮಹಾದೇವಿ ಜಯಂತಿ – 10 ಲಕ್ಷ
4. ಬಸವ ಜಯಂತಿ – 69 ಲಕ್ಷ
5. ಶಂಕರ ಜಯಂತಿ – 10 ಲಕ್ಷ
6. ಭಗೀರಥ ಜಯಂತಿ – 69 ಲಕ್ಷ
7. ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ – 15 ಲಕ್ಷ
8. ಶ್ರೀ ಕೃಷ್ಣ ಜಯಂತಿ – 69 ಲಕ್ಷ
9. ಬ್ರಹ್ಮಶ್ರೀ ನಾರಾಯಣಗುರು ಜಯಂತಿ – 69 ಲಕ್ಷ
10. ವಿಶ್ವಕರ್ಮ ಜಯಂತಿ – 69 ಲಕ್ಷ
11. ಟಿಪ್ಪು ಸುಲ್ತಾನ್ ಜಯಂತಿ – 69 ಲಕ್ಷ
12. ಕನಕ ಜಯಂತಿ – 69 ಲಕ್ಷ
13. ಸಿದ್ದರಾಮ ಜಯಂತಿ – 69 ಲಕ್ಷ
14. ಅಂಬಿಗರ ಚೌಡಯ್ಯ ಜಯಂತಿ – 69 ಲಕ್ಷ
15. ವಾಲ್ಮೀಕಿ ಜಯಂತಿ – 69 ಲಕ್ಷ
16. ಶಿವಾಜಿ ಜಯಂತಿ – 69ಲಕ್ಷ
17. ದಲಿತ ವಚನಕಾರರ ಜಯಂತಿ – 69 ಲಕ್ಷ
18. ಸರ್ವಜ್ಞ ಜಯಂತಿ – 69 ಲಕ್ಷ
19. ಭಗೀರಥ ಜಯಂತಿ – 69 ಲಕ್ಷ
20. ವಿವೇಕಾನಂದ ಜಯಂತಿ – 40 ಲಕ್ಷ