ಆಳದ ನೀರಿನಲ್ಲಿ ಮೀನಿನಂತೆ ಈಜಿ ಪ್ರಾಣಪಣಕ್ಕಿಟ್ಟು ಮೃತದೇಹ ಹೊರತೆಗೀತಾರೆ ಯಾದಗಿರಿಯ ಸಿದ್ದರಾಮ

Public TV
1 Min Read
YGR 1

ಯಾದಗಿರಿ: ಕೆರೆ, ಬಾವಿಯಲ್ಲಿ ಸತ್ತವರ ದೇಹ ತೆಗೆಯೋದು ಕಷ್ಟದ ಕೆಲಸ. ಆದ್ರೆ ನೀರಿನ ಆಳ ಲೆಕ್ಕಿಸದೆ ಪ್ರಾಣದ ಹಂಗು ತೊರೆದು, ನಯಾಪೈಸೆ ಸ್ವೀಕರಿಸದೆ ದೇಹಗಳನ್ನ ಹೊರ ತೆಗೀತಾರೆ ಗುರುಮಿಠಕಲ್‍ನ ಸಿದ್ದರಾಮ.

YGR 2

ಯಾದಗಿರಿಯ ಗುರುಮಿಠಕಲ್ ನಿವಾಸಿಯಾಗಿರೋ ಸಿದ್ದರಾಮ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಖಾಸಗಿ ಬ್ಯಾಂಕ್ ಎಟಿಎಮ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ರಾಗಿ ಕೆಲಸ ಮಾಡೋ ವಿಶೇಷವಾದ ಸಮಾಜಸೇವೆ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಕೆರೆ, ಬಾವಿಗಳಲ್ಲಿ ಮುಳುಗಿ ಸಾವನ್ನಪ್ಪುವವರ ದೇಹವನ್ನ ಹೊರ ತೆಗೆಯುತ್ತಾರೆ. ಕಳೆದ 25 ವರ್ಷಗಳಿಂದ ಈ ಕಾಯಕವನ್ನ ಮಾಡ್ತಿರೋ ಸಿದ್ದರಾಮ ಅವರು, ನಯಾ ಪೈಸೆಯನ್ನೂ ಸ್ವೀಕರಿಸೋದಿಲ್ಲ.

YGR

ಎಷ್ಟೇ ಆಳವಾಗಿದ್ದರೂ ಮೂರೇ ಬಾರಿ ನೀರಿನಲ್ಲಿ ಮುಳುಗಿ ದೇಹವನ್ನ ಹೊರ ತೆಗೆಯುತ್ತಾರೆ. ಗುರುಮಿಠಕಲ್ ಭಾಗದಲ್ಲಿ ಇಲ್ಲಿವರೆಗೆ 200ಕ್ಕೂ ಹೆಚ್ಚು ದೇಹಗಳನ್ನ ಹೊರಗೆ ತೆಗೆದಿದ್ದಾರೆ. ತನ್ನ ಗುರುವಿಗೆ ವಚನ ನೀಡಿದಂತೆ ಸಮಾಜಸೇವೆ ಮಾಡ್ತಿರೋದಾಗಿ ಸಿದ್ದರಾಮ ಹೇಳುತ್ತಾರೆ.

https://www.youtube.com/watch?v=oyaPj3hPe7c

Share This Article
Leave a Comment

Leave a Reply

Your email address will not be published. Required fields are marked *