ತುಮಕೂರು: ಶ್ರೀ ಶಿವಕುಮಾರ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೊಡುವಂತೆ ಯಾರೂ ಆಗ್ರಹಿಸಬೇಡಿ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗಸ್ವಾಮಿಜಿಗಳು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶಸ್ತಿ ಕೊಡಿ ಎನ್ನುವ ಮಾತನ್ನು ಯಾರು ಕೂಡಾ ಆಡಬಾರದು. ಅದನ್ನ ಕೇಳಿ ಪಡೆಯುವ ಪ್ರಶ್ನೆ ಇಲ್ಲ. ಅದಾಗಿಯೇ ಬಂದದ್ದು ಅಮೃತಕ್ಕೆ ಸಮಾನ, ಕೇಳಿ ಬಂದಿದ್ದು ವಿಷಕ್ಕೆ ಸಮಾನ ಆದ್ದರಿಂದ ಬಾಯ್ಬಿಟ್ಟು ಕೇಳುವಂತಹ ಪ್ರಶ್ನೆಯೇ ಇಲ್ಲ ಎಂದರು. ಇದನ್ನೂ ಓದಿ: ಶೀಘ್ರವೇ ಕೋವಿಡ್-19 ಕಾಲರ್ ಟ್ಯೂನ್ ಬಂದ್?
ಯಾರು ಕೇಳಲೇ ಬಾರದು ಅದರ ಬಗ್ಗೆ ಚರ್ಚೆ ಮಾಡಲೇಬಾರದು. ಶ್ರೀಗಳು ಭಾರತ ರತ್ನ ವನ್ನು ಮೀರಿರುವಂತವರು. ಅದು ಬಂದ ಕ್ಷಣಕ್ಕೆ ಅವರ ಗೌರವ ಹೆಚ್ಚುವಂತಹದ್ದಲ್ಲ. ಅದನ್ನ ನಾವು ಯಾರು ನಿರೀಕ್ಷೆ ಮಾಡಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಟ್ಟು 48 ಕೇಸ್ – ಬೆಂಗಳೂರು ಸಹಿತ 4 ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಪ್ರಕರಣ