ತುಮಕೂರು: ಸಿದ್ದಗಂಗಾ ಮಠಕ್ಕೆ ಶ್ರೀಗಳನ್ನು ಶಿಫ್ಟ್ ಮಾಡಲಾಗಿದ್ದು, ಮಠದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಮಠದ ವಿದ್ಯಾರ್ಥಿಗಳಿಗೆ ಶ್ರೀಗಳ ದರ್ಶನ ಸಿಗದ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಕಿರಿಯ ಶ್ರೀಗಳು ಭಾವುಕರಾಗಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕಿರಿಯ ಶ್ರೀಗಳು, ಶ್ರೀಗಳನ್ನು ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಮಠದಲ್ಲೇ ಐಸಿಯೂ ಮಾದರಿಯ ಕೊಠಡಿ ನಿರ್ಮಾಣವಾಗಿದೆ. ಅದೇ ಕೊಠಡಿಯಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಶ್ರೀಗಳು ಆರೋಗ್ಯವಾಗಿ ಇದ್ದಾರೆ. ಯಾರೋ ಇಲ್ಲಸಲ್ಲದ ಮಾಹಿತಿ ನೀಡುತ್ತಿದ್ದಾರೆ. ಆದರೆ ಶ್ರೀಗಳಿಗೆ ಸತತವಾಗಿ ಚಿಕಿತ್ಸೆ ನಡೆಯುತ್ತಿರುವುದರಿಂದ ಅವರಿಗೆ ತೊಂದರೆಯಾಗಬಾದರು. ಇಲ್ಲ ಸಲ್ಲದ ವದಂತಿಗೆ ಕಿವಿಗೊಡಬೇಡಿ ಎಂದು ಕಿರಿಯ ಶ್ರೀಗಳು ಜನರಲ್ಲಿ ಮನವಿ ಮಾಡಿಕೊಂಡರು.
Advertisement
Advertisement
ನನಗೂ ಮಕ್ಕಳಿಗೆ ಶ್ರೀಗಳ ದರ್ಶನ ಮಾಡಿಸಬೇಕು ಅಂತ ಆಸೆ ಇದೆ ಎಂದು ತಕ್ಷಣ ಕಿರಿಯ ಶ್ರೀಗಳು ಮೌನವಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ನಮ್ಮ ಸಿಬ್ಬಂದಿಯೇ ಶ್ರೀಗಳನ್ನು ದರ್ಶನ ಮಾಡಲು ಬಿಡುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಜನರು ಕೂಡ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಆದರೆ ನಾವು ಶ್ರೀಗಳ ಆರೋಗ್ಯದ ಬಗ್ಗೆ ಯೋಚನೆ ಮಾಡಬೇಕು. ನಮಗೆ ಮಕ್ಕಳು, ಭಕ್ತರು ಮತ್ತು ಸಿಬ್ಬಂದಿಯೂ ಬೇಕು. ಚಿಕಿತ್ಸೆ ನೀಡುತ್ತಿರುವುದರಿಂದ ಎಲ್ಲರೂ ಸಹಕರಿಸಬೇಕು. ಎಲ್ಲರೂ ಸಹಕರಿಸುತ್ತಾರೆ ಎಂಬ ಭಾವನೆ ನನ್ನಲ್ಲಿದೆ ಎಂದು ಭಾವುಕರಾಗಿ ಹಳೆಯ ಮಠಕ್ಕೆ ಸಿದ್ದಲಿಂಗ ಸ್ವಾಮೀಜಿ ತೆರಳಿದರು.
Advertisement
Advertisement
ಶ್ರೀಗಳು ಮಠಕ್ಕೆ ಹೋಗಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ಇಂದು ನಸುಕಿನ ಜಾವ ಸುಮಾರು 3.30ಕ್ಕೆ ಸಿದ್ದಗಂಗಾ ಆಸ್ಪತ್ರೆಯಿಂದ ಸಿದ್ದಗಂಗಾ ಮಠಕ್ಕೆ ಶ್ರೀಗಳನ್ನು ಶಿಫ್ಟ್ ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv