ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಾರಾಧನೆ ಹಿನ್ನೆಲೆ ಸಿದ್ದಗಂಗಾ ಮಠಕ್ಕೆ ಭಕ್ತಾಧಿಗಳು ದಾಸೋಹಕ್ಕಾಗಿ ಸಾಮಾಗ್ರಿಗಳನ್ನು ಕಾಣಿಕೆ ನೀಡುತ್ತಿರುವುದನ್ನು ಕಂಡು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಇದೇ ತಿಂಗಳ 31ರಂದು ಡಾ. ಶ್ರೀ ಶಿವಕುಮಾರ ಸ್ವಾಮಿಜಿ ಅವರ ಪುಣ್ಯಾರಾಧನೆಯನ್ನು ಮಾಡಲಾಗುತ್ತಿದೆ. ಆದರಿಂದ ಶ್ರೀಗಳ ಭಕ್ತಾಧಿಗಳು ವಿವಿಧೆಡೆಯಿಂದ ತಮ್ಮ ಕೈಲಾದ ಸಾಮಾಗ್ರಿಗಳನ್ನು ಕಾಣಿಕೆ ರೂಪದಲ್ಲಿ ನೀಡಿ ದಾಸೋಹಕ್ಕೆ ಸಹಾಯ ಮಾಡುತ್ತಿದ್ದಾರೆ. ನಡೆದಾಡುವ ದೇವರಿಗೆ ನಮನ ಸಲ್ಲಿಸಲು ರಾಜ್ಯದ ಹಲವೆಡೆಯಿಂದ ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ, ಬೇಳೆ, ದವಸ ಧಾನ್ಯಗಳನ್ನು ತಂದು ಸಿದ್ದಗಂಗಾ ಮಠಕ್ಕೆ ನೀಡುತ್ತಿದ್ದಾರೆ.ಇದನ್ನೂ ಓದಿ: ಶ್ರೀಗಳ ಪುಣ್ಯಾರಾಧನೆಗೆ ಭಕ್ತರಿಂದ 11 ಟನ್ ಅಕ್ಕಿ ಕಾಣಿಕೆ!
Advertisement
Advertisement
ಭಕ್ತರು ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ದಗಂಗಾ ಮಠದ ಮೇಲೆ ಇಟ್ಟಿರುವ ಪ್ರೀತಿಯನ್ನು ಕಂಡು ಸಿದ್ದಲಿಂಗ ಶ್ರೀಗಳ ಕಣ್ತುಂಬಿ ಬಂತು. ಭಕ್ತರಿಂದ ಕಣ್ಣೀರು ಮರೆ ಮಾಚಲು ಸಿದ್ದಲಿಂಗ ಶ್ರೀಗಳು ತಿರುಗಿನಿಂತು ಕಣ್ಣೀರು ಒರೆಸಿಕೊಂಡರು. ಶ್ರೀಗಳ ಪುಣ್ಯಾರಾಧನೆಗೆ ಸಿದ್ದತೆಗಳು ನಡೆಯುತ್ತಿದ್ದು, ಸಾಲು ಸಾಲಾಗಿ ಲಾರಿಗಳ ಮೂಲಕ ಭಕ್ತಾಧಿಗಳು ದವಸ ಧಾನ್ಯಗಳು ತಂದು ಕಾಣಿಕೆಯಾಗಿ ಮಠಕ್ಕೆ ನೀಡುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv