ಮಠದ ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದ ಸಿದ್ದಗಂಗಾ ಶ್ರೀ

Public TV
1 Min Read
tmk swamiji

ತುಮಕೂರು: ಸಿದ್ದಗಂಗಾ ಮಠದ ಅಂಗಳದಲ್ಲಿ ಕ್ರಿಕೆಟ್ ಕಲರವ ಕೇಳಿಬಂದಿದ್ದು ಶ್ರೀಗಳು ಮಕ್ಕಳ ಜೊತೆ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ.

ಹೌದು. ಸಿದ್ದಲಿಂಗ ಸ್ವಾಮೀಜಿಗಳು ವಿದ್ಯಾರ್ಥಿಗಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಇಷ್ಟು ದಿನ ಶ್ರೀಗಳಾಗಿ ಮಾತ್ರ ವಿದ್ಯಾರ್ಥಿಗಳು ಸಿದ್ದಲಿಂಗ ಸ್ವಾಮೀಜಿ ಅವರನ್ನು ನೋಡಿದ್ದರು. ಆದರೆ ಸ್ವಾಮೀಜಿ ಕೂಡ ಇಷ್ಟೊಂದು ಚೆನ್ನಾಗಿ ಕ್ರಿಕೆಟ್ ಆಡುತ್ತಾರೆ ಎಂಬ ಸಂಗತಿ ಬಹುತೇಕ ಮಂದಿಗೆ ಗೊತ್ತಿರಲಿಲ್ಲ. ಹೀಗಾಗಿ ಸ್ವಾಮೀಜಿ ಬ್ಯಾಟ್ ಬೀಸಿದ ಪರಿಗೆ ವಿದ್ಯಾರ್ಥಿಗಳು ಫಿದಾ ಆಗಿದ್ದಾರೆ.

tmk swamiji 1

ಬುಧವಾರ ಸಂಜೆ ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದು ಶ್ರೀಗಳು ಮಕ್ಕಳೊಟ್ಟಿಗೆ ತಾವೂ ಕೂಡ ಕ್ರಿಕೆಟ್ ಆಡಿ ಖುಷಿ ಪಟ್ಟಿದ್ದಾರೆ. ಸಿಕ್ಸರ್ ಮೇಲೆ ಸಿಕ್ಸರ್ ಭಾರಿಸಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಶ್ರೀಗಳು ಬ್ಯಾಟ್ ಹಿಡಿದು ಸಿಕ್ಸರ್ ಬಾರಿಸುತ್ತಿದ್ದಂತೆ ಮಕ್ಕಳು ಸಿಕ್ಕಾಪಟ್ಟೆ ಖುಷಿಪಟ್ಟರು.

tmk swamiji 2

Share This Article