ಬೆಂಗಳೂರು: ಕಮಿಷನ್ ದಂಧೆ ಆರಂಭವಾಗಿದ್ದೆ ಕಾಂಗ್ರೆಸ್ ಸರ್ಕಾರದಲ್ಲಿ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಆಂದೋಲ ಮಠದ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಮಠಗಳಿಗೆ ಬರುವ ಅನುದಾನದಲ್ಲಿ 30% ಕಮಿಷನ್ ನೀಡಬೇಕು ಎಂಬ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ದಿಂಗಾಲೇಶ್ವರ ಸ್ವಾಮೀಜಿಯವರ ಆರೋಪವನ್ನು ನಾವು ಕೂಡ ಒಪ್ಪಿಕೊಳ್ಳುತ್ತೇವೆ. ಆದರೆ ಕಮಿಷನ್ ದಂಧೆ ಬಿಜೆಪಿ ಸರ್ಕಾರದಲ್ಲಿ ಆರಂಭವಾಗಿಲ್ಲ. 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 30% ಕಮಿಷನ್ ಆರಂಭವಾಗಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯ ಹಿಂದಿದ್ದಾರಾ ಮೌಲ್ವಿ?
Advertisement
Advertisement
ಮಠಗಳಿಂದ 30% ಕಮಿಷನ್ ಆರಂಭವಾಗಿದ್ದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಸರ್ಕಾರದಿಂದ 50 ಲಕ್ಷ ರೂ. ಅನುದಾನ ಪಡೆಯಲು, 15 ಲಕ್ಷ ರೂ. ಕಮಿಷನ್ ಕೊಟ್ಟಿದ್ದೆ. ಈ ವಿಚಾರ ಅಂದೇ ಬಹಿರಂಗಪಡಿಸಲು ಮುಂದಾಗಿದ್ದಾಗ ಕೆಲ ಮಠಾಧೀಶರು ತಡೆದಿದ್ದರು ಎಂದು ಹೇಳಿದರು.
Advertisement
ಈ ವಿವಾದವನ್ನು ಇಂದು ಬಿಜೆಪಿ ಸರ್ಕಾರಕ್ಕೆ ಮಾತ್ರ ಕಳಂಕ ಅಂಟಿಸುತ್ತಿರುವುದು ಕಳವಳಕಾರಿ. ಸರ್ಕಾರದಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಮಾತ್ರ ಬೆಳಕಿಗೆ ಬರುತ್ತದೆ ಎಂದು ತಿಳಿಸಿದರು.