– ವರ್ಷಕ್ಕೆ 250ಕ್ಕೂ ಹೆಚ್ಚು ಯಶಸ್ವಿ ಶಸ್ತ್ರ ಚಿಕಿತ್ಸೆ
ಬೆಂಗಳೂರು/ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಚೆನ್ನೈನ ರೇಲಾ ಇನ್ಸ್ ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ ಗೆ ಕರೆದೊಯ್ಯಲಿದ್ದಾರೆ.
ಸಿದ್ದಗಂಗಾ ಶ್ರೀಗಳು ಕ್ಷೇಮವಾಗಿದ್ದಾರೆ. ಆದ್ರೆ 6 ಸ್ಟಂಟ್ ಅಳವಡಿಸಿರೋದ್ರಿಂದ ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಆದ ಕಾರಣ ಇಂದು ಬೆಳಗ್ಗೆ ಚೆನ್ನೈಗೆ ಕರೆದೊಯ್ಯಲಾಗುತ್ತಿದ್ದು, ಅಲ್ಲಿ ಶ್ರೀಗಳಿಗೆ ಭಾರತದ ಖ್ಯಾತ ಲಿವರ್ ಸ್ಪೆಷಲಿಸ್ಟ್ ಡಾ. ಮೊಹಮ್ಮದ್ ರೇಲಾ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ
Advertisement
Advertisement
ರೇಲಾ ಯಾರು..?
ಡಾ. ಮೊಹಮ್ಮದ್ ರೇಲಾ ಭಾರತ ಖ್ಯಾತ ಲಿವರ್ ಸರ್ಜನ್ ನಲ್ಲಿ ಕೂಡ ಒಬ್ಬರು. ಲಂಡನ್‍ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯ ತಜ್ಞ ವೈದ್ಯರಾಗಿದ್ದ ಮೊಹಮ್ಮದ್ ರೇಲಾ, 5 ದಿನದ ಹಸಿಗೂಸಿಗೆ ಲಿವರ್ ಕಸಿ ಮಾಡೋದ್ರ ಮೂಲಕ ಗಿನ್ನಿಸ್ ಬುಕ್‍ನಲ್ಲಿ ರೆಕಾರ್ಡ್ ಮಾಡಿದ್ರು. ಇದೂವರೆಗೂ 4 ಸಾವಿರ ಲಿವರ್ ಕಸಿ ಮಾಡಿರೋ ಖ್ಯಾತಿ ಇವರದ್ದಾಗಿದೆ. ವರ್ಷಕ್ಕೆ 250ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರೋ ಹೆಗ್ಗಳಿಕೆಗೆ ಡಾ.ಮೊಹಮ್ಮದ್ ಪಾತ್ರರಾಗಿದ್ದಾರೆ.
Advertisement
ಮೂಲತಃ ತಮಿಳುನಾಡಿನ ಮೂಲದವರಾದ ಡಾ. ಮೊಹಮ್ಮದ್ ರೇಲಾ ಹಲವು ಸಾಧನೆಗಳನ್ನು ಮಾಡಿದ್ದಾರೆ. ಈಗ ಶ್ರೀಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಇದನ್ನೂ ಓದಿ: ನಂಗೆ ಎಷ್ಟು ವಯಸ್ಸು- 111 ಅಂದಾಗ, ಬಹಳಾಯ್ತು ಅಂದ್ರು ನಡೆದಾಡೋ ದೇವ್ರು
Advertisement
ಸಿಎಂ ಸೂಚನೆ:
ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಜನರಿಗೆ ಆತಂಕ ಬೇಡ, ಆರೋಗ್ಯ ಸ್ಥಿರವಾಗಿದೆ ಅಂತ ಶೃಂಗೇರಿಯಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಶ್ರೀಗಳಿಗೆ ಬಿಟ್ಟು-ಬಿಟ್ಟು ಸ್ವಲ್ಪ ಜ್ವರ ಬರ್ತಿದೆ, ಅವರ ಆರೋಗ್ಯದ ಸಂಬಂದ ಪಿನ್ ಟು ಪಿನ್ ಮಾಹಿತಿ ತರಿಸಿಕೊಳ್ತಿದ್ದೇನೆ. ಮಠದ ಕಿರಿಯ ಸ್ವಾಮೀಜಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ಚಿಕಿತ್ಸೆ ಅನಿವಾರ್ಯತೆ ಇದ್ರೆ ಆಸ್ಪತ್ರೆ ದಾಖಲು ಮಾಡಲು ಹೇಳಿದ್ದೇನೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರಕ್ಕೆ ಸೂಚಿಸಿದ್ದೇನೆ. ಯಾರೂ ಗಾಬರಿಪಡೋ ಅಗತ್ಯವಿಲ್ಲ ಅವರು ನಮ್ಮೊಂದಿಗೆ ಇನ್ನೂ ಇರಬೇಕೆಂದು ಶಾರದಾಂಬೆಗೆ ಬೇಡಿಕೊಳ್ತೇನೆ ಅಂತ ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv