– ಐದು ದಿನದ ಕಂದಮ್ಮನಿಂದ ಶತಾಯುಷಿ ಶ್ರೀಗಳವರೆಗೆ..!
– ಬೆಂಗಳೂರಲ್ಲೂ ಕೆಲಸ ಮಾಡಿದ್ದರು ಡಾ.ಮೊಹಮ್ಮದ್ ರೇಲಾ
– ಪವಿತ್ರ ಕಡ್ತಲ
ಬೆಂಗಳೂರು: ಲಿವರ್ (ಯಕೃತ್) ಕಸಿ ಶಸ್ತ್ರಚಿಕಿತ್ಸೆಯಲ್ಲಿ ಗಿನ್ನೆಸ್ ದಾಖಲೆ ಬರೆದಿರುವ ಡಾ.ಮೊಹಮ್ಮದ್ ರೇಲಾ ಅವರು ಇಂದು ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ ನೀಡಲಿದ್ದಾರೆ. ಗುರುವಾರ ರಾತ್ರಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಚೆನ್ನೈನ ಖ್ಯಾತ ಅರಿವಳಿಕೆ ತಜ್ಞ ಎಲ್.ಎನ್.ಕುಮಾರ್ ಅವರು ಸಿದ್ದಗಂಗಾ ಶ್ರೀಗಳಿಗೆ ಆಪರೇಷನ್ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳನ್ನು ಇಂದು ಚೆನ್ನೈಗೆ ಕರೆದೊಯ್ಯಲು ನಿರ್ಧರಿಸಲಾಗಿದೆ.
Advertisement
ಚೆನ್ನೈನಲ್ಲಿ ಶ್ರೀಗಳಿಗೆ ರೇಲಾ ಇನ್ಸ್ ಟಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. ಈ ಆಸ್ಪತ್ರೆಯ ವೈದ್ಯ ಡಾ.ಮೊಹಮ್ಮದ್ ರೇಲಾ ಅವರು ಲಿವರ್ ತಜ್ಞರಾಗಿದ್ದಾರೆ. ಅವರು 5 ದಿನದ ಹಸುಗೂಸಿಗೂ ಲಿವರ್ ಕಸಿ ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್ ಗೆ ಭಾಜನರಾಗಿದ್ದಾರೆ.
Advertisement
Advertisement
ಡಾ.ಮೊಹಮ್ಮದ್ ರೇಲಾ ಭಾರತ ದೇಶ ಮಾತ್ರವಲ್ಲದೇ ಜಗತ್ತಿನ ಬೆಸ್ಟ್ ಡಾಕ್ಟರ್ ಅನ್ನಿಸಿಕೊಂಡವರು. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಯಕೃತಿನ ಕಸಿಯನ್ನು ಮಾಡಿದ್ದಾರೆ. ಅವರೇ ಶತಾಯುಷಿಗಳಾದ ಸಿದ್ದಗಂಗಾ ಶ್ರೀಗಳಿಗೆ ಇಂದು ಚಿಕಿತ್ಸೆ ನೀಡಲಿದ್ದಾರೆ ಎನ್ನುವುದೂ ವಿಶೇಷ.
Advertisement
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ವಿಲಾಸ್ ರಾವ್ ದೇಶ್ ಮುಖ್, ತಮಿಳುನಾಡು ಸಿಎಂ ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾ ಪತಿ ನಟರಾಜ್ ಅವರಿಗೂ ಮಹಮ್ಮದ್ ರೇಲಾ ಅವರೇ ಚಿಕಿತ್ಸೆ ನೀಡಿದ್ದರು.
5 ದಿನದ ಹಸುಗೂಸು ಈಗ 21 ವರ್ಷದ ಯುವತಿ!:
ಹುಟ್ಟಿದ ಐದು ದಿನಕ್ಕೇ ಲಿವರ್ ಕಸಿ ಮಾಡಿಸಿಕೊಂಡಿದ್ದ ಆ ಮುದ್ದು ಪೋರಿ ಬೇವನ್ ಈಗ 21 ವರ್ಷ ಯುವತಿ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬೇವಾನ್ ಮತ್ತು ಡಾ.ಮೊಹಮ್ಮದ್ ರೇಲಾ ಅವರು ಲಂಡನ್ ನ ಕಿಂಗ್ಸ್ ಕಾಲೇಜಿನಲ್ಲಿ ಭೇಟಿಯಾಗಿದ್ದರು. “ಅಂದು 20 ವರ್ಷ ಹಿಂದೆ ಆಪರೇಷನ್ ಮಾಡಿದಾಗ ನನ್ನಲ್ಲಿ ಗಿನ್ನೆಸ್ ದಾಖಲೆ ಮಾಡುವ ಯಾವ ಉದ್ದೇಶವೂ ಇರಲಿಲ್ಲ. ಅದಾಗಲೇ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದ ಆ ದಂಪತಿಯ ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇ ಬೇಕು ಅಂತ ಲಿವರ್ ಕಸಿಮಾಡಿದೆವು. ಆದರೆ ಅದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗುತ್ತದೆ ಎಂದು ಆಮೇಲೆ ಗೊತ್ತಾಯಿತು” ಎಂದು ಡಾ.ರೇಲಾ ಅವರು ಬೇವಾನ್‍ಳನ್ನು ನೋಡುತ್ತಾ ಹೇಳಿದ್ದರು.
ಇದೇ ವೇಳೆ ಮಾತನಾಡಿದ್ದ ಬೇವಾನ್, ಮೊಹಮ್ಮದ್ ಡಾಕ್ಟರ್ ಇಲ್ಲದಿದ್ದರೆ ನಾನು ಇಂದು ಇರುತ್ತಿರಲಿಲ್ಲ ಎಂದು ಹೇಳಿ ಭಾವುಕರಾಗಿ ವೈದ್ಯರಿಗೆ ಥ್ಯಾಂಕ್ಸ್ ಹೇಳಿದ್ದರು.
ಡಾ.ಮೊಹಮ್ಮದ್ ರೇಲಾ ಯಾರು?:
ಮೊಹಮ್ಮದ್ ರೇಲಾ ಅವರು ಲಿವರ್ ತಜ್ಞರು. ಸುಮಾರು 30 ವರ್ಷದಿಂದ ಲಿವರ್ ಕಸಿ ಮಾಡುತ್ತಿದ್ದಾರೆ. 2009ರಲ್ಲಿ ಗ್ಲೋಬಲ್ ಗ್ಲೆನ್ ಈಗಲ್ಸ್ ಹೆಲ್ತ್ ಸಿಟಿಯಲ್ಲಿ ಲಿವರ್ ಕಾಯಿಲೆ ಮತ್ತು ಕಸಿ ಕೇಂದ್ರವನ್ನು ಆರಂಭಿಸಿದರು. ಜೊತೆಗೆ ಲಂಡನ್ ನ ಕಿಂಗ್ಸ್ ಕಾಲೇಜ್ ಹಾಸ್ಪಿಟಲ್‍ನ ಲಿವರ್ ಕಸಿ ಸರ್ಜರಿ ವಿಭಾಗದ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಗ್ಲೋಬಲ್ ಗ್ಲೆನ್ ಈಗಲ್ ಸಂಸ್ಥೆಯನ್ನು ಬಿಟ್ಟು ಹೊರಬಂದ ಡಾ.ಮೊಹಮ್ಮದ್ ರೇಲಾ ಅವರು ಡಾ. ರೇಲಾ ಇನ್ಸ್ ಟಿಟ್ಯೂಟ್ & ಮೆಡಿಕಲ್ ಸೆಂಟರ್ ಆರಂಭಿಸಿದರು. ಇದುವರೆಗೆ ಡಾ.ರೇಲಾ ಸುಮಾರು 4,000ಕ್ಕೂ ಹೆಚ್ಚು ಲಿವರ್ ಕಸಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಅವರು ಬೆಂಗಳೂರಿನಲ್ಲೂ ಕಾರ್ಯ ನಿರ್ವಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv