ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಶ್ರೀಗಳು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಪಿತ್ತಕೋಶ ಮತ್ತು ಪಿತ್ತನಾಳದಲ್ಲಿ ಸೋಂಕು ಉಂಟಾದ ಹಿನ್ನೆಲೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದೂ ಕೂಡಾ ಶ್ರೀಗಳಿಗೆ ಚಿಕಿತ್ಸೆ ನೀಡಿ ಶ್ರೀಗಳ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಿದ್ದಾರೆ.
Advertisement
Advertisement
ಭಾನುವಾರ ಸ್ಟಂಟ್ ಅಳವಡಿಕೆ ವೇಳೆ ಶ್ರೀಗಳಿಗೆ ಅನಸ್ತೇಶಿಯ ನೀಡಲಾಗಿತ್ತು. ಇಂದು ಅದರ ರಿಪೋರ್ಟ್ ಬಂದ ಬಳಿಕ ಯಾವುದೇ ತೊಂದರೆ ಇಲ್ಲ ಎಂದು ತಿಳಿದ ಮೇಲೆ ಡಿಸ್ಚಾರ್ಜ್ ಮಾಡಿದ್ದಾರೆ. ಇಂದು ಮಧ್ಯಾಹ್ನ ತುಮಕೂರಿನ ಹಳೆ ಮಠಕ್ಕೆ ತೆರಳಿದ ಶ್ರೀಗಳು ಪರಿಚಾರಕರ ನೆರವಿನಿಂದ ನಡೆದುಕೊಂಡು ಹೋದ್ರು. ಮುಂದಿನ ಒಂದು ವಾರಗಳ ಕಾಲ ಶ್ರೀಗಳು ಹಳೆ ಮಠದಲ್ಲೇ ವಿಶ್ರಾಂತಿ ಪಡೆಯಲಿದ್ದು, ಭಕ್ತರಿಗೆ ದರ್ಶನ ಸಿಗೋದಿಲ್ಲ ಅಂತಾ ಶ್ರೀಗಳ ಉಸ್ತುವಾರಿ ವೈದ್ಯ ಡಾ.ಪರಮೇಶ್ ಮಾಹಿತಿ ನೀಡಿದ್ದಾರೆ.
Advertisement
Advertisement
ಸದ್ಯ ಶ್ರೀಗಳ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದ್ದು 4 ಮೆಟಲ್ ಹಾಗೂ 7 ಪ್ಲಾಸ್ಟಿಕ್ ಸ್ಟಂಟ್ ಗಳು ಶ್ರೀಗಳ ದೇಹದಲ್ಲಿವೆ. ಸಿದ್ದಗಂಗಾ ಆಸ್ಪತ್ರೆಯ ವೈದ್ಯರು 24 ಗಂಟೆಗಳ ಆರೈಕೆ ಮಾಡಲಿದ್ದಾರೆ ಅಂತಾ ಅವರು ಸ್ಪಷ್ಟಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv