Districts

ಕೊಡಗಿನಲ್ಲಿ ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬ ಆಚರಣೆ

Published

on

Share this

ಮಡಿಕೇರಿ:ನಡೆದಾಡೋ ದೇವರೆಂದೇ ಖ್ಯಾತರಾದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳಿಗೆ ಅವರಿಗೆ ಇಂದು 110ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಭಕ್ತರು ಶ್ರೀಗಳ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೆಟೆ ಕುಶಾಲನಗರದಲ್ಲಿ ಪೌರಕಾರ್ಮಿಕರು ಸಾರ್ವಜನಿಕರೆಲ್ಲಾ ಸೇರಿ ಸಂಭ್ರಮ ಸಡಗರದಿಂದ ಹಬ್ಬದ ರೀತಿಯಲ್ಲಿ ಶ್ರೀಗಳ ಜನ್ಮ ದಿನ ಆಚರಿಸಿದರು. ವಚನಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಬ್ಬದ ವಾತಾವರಣ ಕಂಡು ಬಂತು.

ಸ್ವಾಮೀಜಿ ಅವರ ಭಾವ ಚಿತ್ರಕ್ಕೆ ಅಲಂಕಾರಮಾಡಿ, ಕುಶಾಲನಗರದ ಮುಖ್ಯ ಬೀದಿ-ಬೀದಿಯಲ್ಲಿ ಮೆರವಣಿಗೆ ಮಾಡಿದರು. ಕುಶಾಲನಗರದ ಶ್ರೀಗಳ ಭಕ್ತರೆಲ್ಲಾ ಒಂದಾಗಿ ಹಬ್ಬದಂತೆ ತಮ್ಮ ನೆಚ್ಚಿನ ಗುರುವಿನ ಹುಟ್ಟು ಹಬ್ಬ ಆಚರಿಸಿದರು.

110ನೇ ಜನ್ಮ ದಿನದ ಸಂಕೇತವಾಗಿ 110 ಕಲಶಗಳನ್ನು ಹೊತ್ತ ಮಹಿಳೆಯರು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶ್ರೀಗಳ ಆಯುರಾರೋಗ್ಯಕ್ಕೆ ಪ್ರಾರ್ಥಿಸಿದರು. ದೇಶದಲ್ಲಿಯೇ ಮಹಾನ್ ಸಾಧನೆಗೈದ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ ಮಾಡಿದ್ರು.

Click to comment

Leave a Reply

Your email address will not be published. Required fields are marked *

Advertisement
Advertisement