ತುಮಕೂರು: ನಡೆದಾಡುವ ದೇವರಾದ ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಭಕ್ತಾದಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಬಿಜಿಎಸ್ ವೈದ್ಯರಾದ ಡಾ.ರವೀಂದ್ರ ಹಾಗೂ ಡಾ.ವೆಂಕಟರಮಣ ಹೇಳಿದ್ದಾರೆ.
ಶ್ರೀಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಬಿಜಿಎಸ್ ವೈದ್ಯ ರವೀಂದ್ರ ನೇತೃತ್ವದ ತಂಡವು ಸಿದ್ದಗಂಗಾ ಮಠಕ್ಕೆ ಆಗಮಿಸಿ, ಶ್ರೀಗಳ ಆರೋಗ್ಯ ತಪಾಸಣೆ ಮಾಡಿದರು. ಬಳಿಕ ಮಾತನಾಡಿದ ವೈದ್ಯರು, ಶ್ರೀಗಳ ದೇಹದಲ್ಲಿ ಪ್ರೋಟಿನ್ ಅಂಶ ಕಡಿಮೆ ಇರುವುದರಿಂದ ತೊಂದರೆಯಾಗಿತ್ತು. ಈಗ ಚೇರಿಸಿಕೊಂಡಿದ್ದಾರೆ ಎಂದು ತಿಳಿಸಿದರು.
Advertisement
Advertisement
ಶಿವಕುಮಾರ ಸ್ವಾಮೀಜಿಗಳು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ. ಮಠದಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳ ಶ್ವಾಸಕೋಶದಲ್ಲಿ ತುಂಬಿಕೊಂಡಿರುವ ನೀರನ್ನು 150 ರಿಂದ 200 ಎಂಎಲ್ ನಂತೆ ಎರಡು ದಿನಕ್ಕೊಮ್ಮೆ ತೆಗೆಯಲಾಗುತ್ತಿದೆ. ಶಿವಕುಮಾರ ಸ್ವಾಮೀಜಿಗಳ ನಾಡಿ ಮಿಡಿತ (ಪಲ್ಸ್ ರೇಟ್) ಕೂಡ 75 ಇರುವುದರಿಂದ ಆತಂಕ ದೂರವಾಗಿದೆ ಎಂದು ತಿಳಿಸಿದರು.
Advertisement
ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಹಾಗೂ ಎಸ್‍ಪಿ ದಿವ್ಯಾ ಗೋಪಿನಾಥ್ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ಶ್ರೀಗಳ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಾತನಾಡಿದ ಡಾ.ರಾಕೇಶ್ ಕುಮಾರ್, ಶಿವಕುಕುಮಾರ ಸ್ವಾಮೀಜಿಗಳು ಕ್ಷೇಮವಾಗಿದ್ದಾರೆ. ಭಕ್ತಾದಿಗಳು ಊಹಾಪೋಹಗಳಿಗೆ ಕಿವಿಗೊಡಬಾರದು. ಶ್ವಾಸಕೋಶದಲ್ಲಿ ಕಫ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv