ಬೆಂಗಳೂರು: ನಾಡಿನ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಆರೋಗ್ಯ ತಪಾಸಣೆಗೆ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.
ಎರಡು ತಿಂಗಳಿಗೊಮ್ಮೆ ನಡೆಯುವ ಆರೋಗ್ಯ ತಪಾಸಣೆಗೆ ಶ್ರೀಗಳನ್ನ ಶ್ರೀ ಮಠದ ಹಳೆಯ ಮಠದಿಂದ ಕರೆತರಲಾಗಿತ್ತು. ಡಾ. ರವೀಂದ್ರ ಎರಡು ದಿನಗಳ ಹಿಂದೆ ಬಂದು ತಪಾಸಣೆ ಮಾಡಿದ್ದಾರೆ. ಶ್ರೀಗಳಿಗೆ ಅಳವಡಿಸುವ ಸ್ಟಂಟ್ ಸೋಂಕು ತಗುಲಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಪರೀಕ್ಷೆಗಾಗಿ ಶ್ರೀಗಳನ್ನ ಕರೆ ತರಲಾಗಿದೆ ಎಂದು ಎಂದು ಶ್ರೀ ಗಳನ್ನ ನಿರಂತವಾಗಿ ವೈದ್ಯಕೀಯ ತಪಾಸಣೆ ನಡೆಸುವ ಡಾ. ಪರಮೇಶ್ ತಿಳಿಸಿದ್ದಾರೆ.
Advertisement
Advertisement
ಶ್ರೀಗಳ ಜೊತೆ ಕಿರಿಯ ಶ್ರೀ ಸಿದ್ಧಲಿಂಗಸ್ವಾಮೀಜಿ ಹಾಗೂ ಕಣ್ಣೂರು ಸ್ವಾಮೀಜಿ ಆಗಮಿಸಿದ್ದು, ವೈದ್ಯಕೀಯ ವರದಿ ಬಳಿಕ ವೈದ್ಯರ ಸಲಹೆ ಮೇರೆಗೆ ಮಠಕ್ಕೆ ವಾಪಸ್ ಕರೆ ತರಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಪೊಲೀಸ್ ಬೆಂಗಾವಲಿನಲ್ಲಿ ಶ್ರೀಗಳನ್ನು ಕೆಂಗೇರಿ ಬಿಜಿಎಸ್ ಆಸ್ಪತ್ರೆಗೆ ಕರೆ ತರಲಾಗಿದೆ. ಕಳೆದ ಜೂನ್ ನಲ್ಲಿ 5 ಸ್ಟಂಟ್ ಗಳನ್ನು ಅಳವಡಿಸಲಾಗಿತ್ತು. ಬಳಿಕ 3 ಸ್ಟಂಟ್ ಅಳವಡಿಸಲಾಗಿತ್ತು. ಇದರಿಂದ 6 ತಿಂಗಳಿಗೆ ಒಮ್ಮೆ ತಪಾಸಣೆಗೆ ನಡೆಸಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
Advertisement
ಮಧ್ಯಾಹ್ನ 3 ಗಂಟೆಗೆ ತುಮಕೂರಿನಿಂದ ಹೊರಟ ಶ್ರೀಗಳು ಆಸ್ಪತ್ರೆಗೆ ಆಗಮಿಸಿದರು. ಈ ವೇಳೆ ಆಸ್ಪತ್ರೆಯ ಒಳಗೆ ತೆರಳಲು ವೀಲ್ಹ್ ಚೇರ್ ನಲ್ಲಿ ಕುಳಿತುಕೊಳ್ಳಲು ನಿರಾಕರಿಸಿ ತಾವೇ ನಡೆದುಕೊಂಡು ತೆರಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv