ತುಮಕೂರು: ಇಂದು ರಾಜ್ಯದೆಲ್ಲೆಡೆ ಮತದಾನ ನಡೆಯುತ್ತಿದ್ದು, ತುಮಕೂರಿನಲ್ಲಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಮಠದ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 133 ರಲ್ಲಿ ಶ್ರೀಗಳು ಮತದಾನ ಮಾಡಿದ್ದಾರೆ. 111 ರ ಇಳಿವಯಸ್ಸಿನಲ್ಲೂ ಅತ್ಯಂತ ಲವಲವಿಕೆಯಿಂದಲೇ ಶ್ರೀಗಳು ವೋಟ್ ಹಾಕಿರುವುದು ವಿಶೇಷವಾಗಿದೆ.
Advertisement
Advertisement
ನೆಲಮಂಗಲದಲ್ಲೂ ಶತಾಯುಷಿ ಮತದಾನ:
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಎಲೇಕ್ಯಾತನಹಳ್ಳಿ ಹಾಗೂ ನಿಡವಂದ ಗಳಲ್ಲಿ ಎಲೇಕ್ಯಾತನಹಳ್ಳಿಯ 102 ವರ್ಷದ ಪುಟ್ಟ ಅರಸಯ್ಯ ಹಾಗೂ ನಿಡವಂದದಲ್ಲಿ 110 ವರ್ಷದ ಅಟ್ಟಮ್ಮ ಮತದಾನ ಮಾಡಿ ಮಾದರಿಯಾದರು.
Advertisement
ಬೇರೆಯವರ ಸಹಾಯ ಪಡೆದು ಪುಟ್ಟ ಅರಸಯ್ಯ ಮತದಾನ ಮಾಡಿದರೆ ವ್ಹೀಲ್ ಚೇರ್ ಮುಖಾಂತರ ಆಗಮಿಸಿದ ಅಟ್ಟಮ್ಮ ತನ್ನ ಸಂಬಂಧಿಯ ಸಹಾಯ ಪಡೆದು ಮತ ಚಲಾಯಿಸಿದರು. ಒಟ್ಟಿನಲ್ಲಿ ತಮ್ಮ ವಯೋಮಾನ ವನ್ನು ಲೆಕ್ಕಿಸಿದೆ ಮತ ಹಾಕಿದ್ದು ವಿಶೇಷವಾಗಿತ್ತು.
Advertisement
ಜಯನಗರ ಮತ್ತು ಆರ್ ಆರ್ ನಗರ ಬಿಟ್ಟು ಕರ್ನಾಟಕದ ಒಟ್ಟು 222 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದೆ. ಹಲವೆಡೆ ಮತಯಂತ್ರಗಳು ಕೈ ಕೊಟ್ಟಿದ್ದು, ಮತದಾರರು ನಿರಾಶರಾಗಿ ಹಿಂದಿರುಗಿದ್ದಾರೆ. ಇನ್ನು ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ.