ಬೆಂಗಳೂರು: ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳ ಕುರಿತ ಅನೇಕ ಬರಹಗಳನ್ನು ಜನರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇಂತದ್ದೆ ಒಂದು ಪೋಸ್ಟ್ ಒಂದು ಸಿದ್ದಗಂಗಾ ಶ್ರೀಗಳು ಮಹಿಳೆಯರ ಬಗ್ಗೆ ಹೊಂದಿದ್ದ ಕಾಳಜಿ, ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದೆ.
ರಂಗಕರ್ಮಿ ಸುಷ್ಮಾ ರಾವ್ ಎಂಬವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಸಿದ್ದಗಂಗಾ ಶ್ರೀಗಳು ಬಗ್ಗೆ ಪೋಸ್ಟ್ ಹಾಕಿದ್ದಾರೆ. ಇದನ್ನು ಓದಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ, ಶ್ರೀಗಳಿಗೆ ಗೌರವ ಸಲ್ಲಿಸಿದ್ದಾರೆ.
Advertisement
ಪೋಸ್ಟ್‌ನಲ್ಲಿ ಏನಿದೆ?:
ನಾನು 13 ವರ್ಷದವಳಿದ್ದಾಗ ಶಿವಗಂಗೆಗೆ ಶಾಲಾ ಪ್ರವಾಸಕ್ಕೆ ಹೋಗಿದ್ದೇವು. ಅಲ್ಲಿಂದ ಮರಳುವಾಗ ನಮಗೆ ಸಿದ್ದಗಂಗಾ ಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಠವನ್ನು ತಲುಪಿ ಪ್ರಸಾದ ಗೃಹಕ್ಕೆ ಹೋಗುವ ಮುನ್ನ ನಾನು ಹಾಗೂ ಕೆಲ ವಿದ್ಯಾರ್ಥಿನಿಯರು ನಮಗೆ ಪ್ರತ್ಯೇಕವಾಗಿ ಕೂರಲು ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡಿದ್ದೆವು. ನಾವು ಪ್ರಸಾದ ಗೃಹದ ಹೊರಗೆ ನಿಂತಿದ್ದನ್ನು ನೋಡಿದ ಕೇಸರಿ ಬಟ್ಟೆ ಉಟ್ಟ ವೃದ್ಧ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು, ನೀವು ಇಲ್ಲಿ ಏಕೆ ನಿಂತಿದ್ದೀರಿ ಎಂದು ಪ್ರಶ್ನಿಸಿದರು. ಆಗ ವಿದ್ಯಾರ್ಥಿನಿಯರು, ನಾವು ಮುಟ್ಟಿನ ದಿನಗಳಲ್ಲಿದ್ದೇವೆ. ಹೀಗಾಗಿ ನಮಗೆ ಪ್ರತ್ಯೇಕವಾಗಿ ಪ್ರಸಾದಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಕೇಳಿದ್ದೇವೆ ಎಂದು ತಿಳಿಸಿದ್ದೆವು.
Advertisement
Advertisement
ನಮ್ಮ ಮಾತು ಕೇಳಿದ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿ, ಇದು ಮಹಿಳೆಯರ ಸಹಜ ದೈಹಿಕ ಕ್ರಿಯೆ. ಇದಕ್ಕೆ ನೀವು ನಾಚಿಕೊಳ್ಳಬೇಕಿಲ್ಲ, ಹಿಂಜರಿಯಬೇಡಿ ಎಂದು ಹೇಳಿ, ಎಲ್ಲರೊಡನೆ ಪ್ರಸಾದಕ್ಕೆ ಕೂರುವಂತೆ ತಿಳಿಸಿದರು.
Advertisement
ನಿಮ್ಮ ದೇಹದ ಬಗ್ಗೆ ನಿಮಗೆ ಹೆಮ್ಮೆ ಇರಬೇಕು ಎಂದು ಶ್ರೀಗಳು ನಗುವಿನ ಮೂಲಕ ಹೇಳಿದರು. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ನಾನು ಕೇಳಿದಾಗ ಅವರು ನಡೆದಾಡುವ ದೇವರು, ಶ್ರೀ ಶಿವಕುಮಾರಸ್ವಾಮೀಜಿ ಎನ್ನುವುದು ತಿಳಿಯಿತು. ಸಿದ್ದಗಂಗಾ ಶ್ರೀಗಳು ಅನೇಕರಿಗೆ ಆದರ್ಶವಾಗಿರುವುದು ಇಂತಹ ವಿಚಾರಗಳಿಗೆ ಎಂದು ಸುಷ್ಮಾ ಬರೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv