ಬೆಂಗಳೂರು: ಶತಾಯುಷಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಮಠದಲ್ಲಿ ಭಕ್ತರು ಸಂತಸಗೊಂಡಿದ್ದಾರೆ.
ಬಿಜಿಎಸ್ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಮುಂಜಾನೆ 6 ಗಂಟೆಗೆ ನುರಿತ ವೈದ್ಯರಿಂದ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. 7.30ರ ಲಿಂಗ ಪೂಜೆ ಬಳಿಕ ಬಿಜಿಎಸ್ ವೈದ್ಯರ ತಂಡ ಸಿಟಿ ಸ್ಕ್ಯಾನ್ ಮಾಡಲಿದ್ದಾರೆ. ಸಿಟಿ ಸ್ಕ್ಯಾನ್ ಬಳಿಕ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡುಬಂದಲ್ಲಿ ಡಿಸ್ಚಾರ್ಜ್ ಸಾಧ್ಯತೆಗಳಿವೆ ಎಂಬುದಾಗಿ ತಿಳಿದುಬಂದಿದೆ.
Advertisement
Advertisement
ಆಸ್ಪತ್ರೆಯಲ್ಲಿ ಶಿವಕುಮಾರ ಶ್ರೀಗಳ ಜೊತೆ ಮಠದ ಕಿರಿಯ ಶ್ರೀಗಳು ಇದ್ದಾರೆ. ಮಠದಲ್ಲಿ ನೂರಾರು ಭಕ್ತರು ಶ್ರೀಗಳು ಕುಳಿತುಕೊಳ್ಳುತ್ತಿದ್ದ ಹಳೇಮಠದ ಗದ್ದುಗೆಗೆ ನಮಸ್ಕರಿಸಿ ವಾಪಸ್ಸಾಗುತಿದ್ದಾರೆ. ಶ್ರೀಗಳು ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
Advertisement
Advertisement
ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಶುಕ್ರವಾರ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಾಮೀಜಿ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಬಿಪಿಯಲ್ಲಿ ಬದಲಾವಣೆಯಾಗಿದೆ ಅಷ್ಟೇ. ಯಾರೂ ಹೆದರಬೇಡಿ. ಶ್ರೀಗಳ ಆರೋಗ್ಯ ಬೇಗ ಸುಧಾರಿಸುತ್ತದೆ ಎಂದು ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ನಿನ್ನೆ ತಿಳಿಸಿದ್ದರು.
ಶ್ರೀಗಳಿಗೆ ಗುರುವಾರ ರಾತ್ರಿ ಸುಮಾರು 1 ಗಂಟೆಗೆ ಜ್ವರ, ಬಿಪಿ, ಕಫ ಕಂಡುಬಂದಿತ್ತು. ಈಗಾಗಲೇ ರಕ್ತ ಪರೀಕ್ಷೆ, ಎಕ್ಸ್ ರೇ ಮಾಡಲಾಗಿದೆ. ಇದರಲ್ಲಿ ನಿಮೋನಿಯಾ ಕಂಡು ಬಂದಿದೆ. ರಕ್ತ ಪರೀಕ್ಷೆಯ ಮಾಡಿದ್ದೇವೆ. ರಿಪೋರ್ಟ್‍ನಲ್ಲಿ ಸ್ವಾಮೀಜಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಹೇಳಿದ್ದರು.