Connect with us

Bengaluru City

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ವೈದ್ಯರು ಹೇಳಿದ್ದೇನು?

Published

on

ಬೆಂಗಳೂರು: ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಪಿತ್ತನಾಳದಲ್ಲಿ ಅಳವಡಿಸಿದ್ದ ಸ್ಟೆಂಟ್‍ಗೆ ಸೋಂಕು ತಗಲಿದ ಪರಿಣಾಮ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಸುಮಾರು ಒಂದು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಯ್ತು.

ಖ್ಯಾತ ವೈದ್ಯ ಗ್ಯಾಸ್ಟ್ರೋ ಎಂಟಾಲಾಜಿಸ್ಟ್ ಡಾ.ರವೀಂದ್ರ ನೇತೃತ್ವದಲ್ಲಿ ಎಂಡೋಸ್ಕೊಪಿ ಮೂಲಕ ಸ್ಟೆಂಟ್ ಬದಲಾವಣೆ ಮಾಡಲಾಯ್ತು. ಸದ್ಯ ಶ್ರೀಗಳನ್ನು ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದ್ದು, ಇನ್ನು 24 ಗಂಟೆಗಳಲ್ಲಿ ಶ್ರೀಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ. ಶನಿವಾರ ಸಂಜೆ ವೇಳೆಗೆ ಸಿದ್ದಗಂಗಾ ಮಠಕ್ಕೆ ತೆರಳುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ ಶ್ರೀಗಳು, ನನಗೆ ಮಠದಲ್ಲೇ ಚಿಕಿತ್ಸೆ ನೀಡಿ ಅಂತ ಒತ್ತಾಯ ಮಾಡಿದ್ರು. ಕಡೆಗೆ ವೈದ್ಯರು ಮನವೊಲಿಸಿ ಶಸ್ತ್ರಚಿಕಿತ್ಸೆಗೆ ಒಪ್ಪಿಸಿದ್ರು. ಶ್ರೀಗಳು ಬಿಜಿಎಸ್ ಆಸ್ಪತ್ರೆಗೆ ದಾಖಲಾಗ್ತಿದ್ದಂತೆ, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಸುತ್ತೂರು ದೇಶಿಕೇಂದ್ರ ಶ್ರೀಗಳು, ಕೊಳದಮಠ ಸ್ವಾಮೀಜಿ, ವಿ. ಸೋಮಣ್ಣ, ನಟ ಗಣೇಶ್ ದಂಪತಿ ಸೇರಿದಂತೆ ಹಲವು ಗಣ್ಯರು ಶ್ರೀಗಳ ಆರೋಗ್ಯ ವಿಚಾರಿಸಿದ್ರು.

ವೈದ್ಯರು ಹೇಳಿದ್ದೇನು?
ಶ್ರೀಗಳ ಪಿತ್ತನಾಳ ಬ್ಲಾಕ್ ಆಗಿತ್ತು. ಯೂರಿನ್, ನಿಮೋನಿಯ ಇನ್ಫೆಕ್ಷನ್ ಆಗಿತ್ತು. ಸ್ಟೆಂಟ್ ಒಳಗೆಯೇ ಮತ್ತೊಂದು ಸ್ಟೆಂಟ್ ಅಳವಡಿಸಲಾಗಿದೆ. ಕಳೆದ ಬಾರಿಯಂತೆ ಮೆಟಲ್ ಸ್ಟೆಂಟ್ ಅಳವಡಿಸಲಾಗಿದೆ. ಸ್ವಾಮೀಜಿ ಅವರಿಗೆ 110 ವಯಸ್ಸಾಗಿರೋದ್ರಿಂದ ಅನಸ್ತೇಶಿಯಾ ನೀಡಿ ಸರ್ಜರಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮೈಲ್ಡ್ ಅನಸ್ತೇಶಿಯಾ ನೀಡಿ ಎಂಡೋಸ್ಕೊಪಿ ಮೂಲಕ ಸ್ಟೆಂಟ್ ಅಳವಡಿಸಲಾಗಿದೆ. 24 ಗಂಟೆಯಲ್ಲಿ ಸ್ವಾಮೀಜಿ ಚೇತರಿಸಿಕೊಳ್ಳಲಿದ್ದಾರೆ. ದೇವರ ಆಶೀರ್ವಾದದಿಂದ ಚಿಕಿತ್ಸೆ ಸಫಲ ಆಗಿದೆ. ಮೆಟಲ್ ಸ್ಟೆಂಟ್ ಒಂದು ವರ್ಷದ ಕಾಲ ಅವಧಿ ಇರಲಿದೆ. ಕಳೆದ ಒಂದು ವಾರದಿಂದ ಶ್ರೀಗಳು ಜ್ವರದಿಂದ ಬಳಲುತ್ತಿದ್ದರು. ಅವರಿಗೆ ವಯೋಸಹಜ ಬಳಲಿಕೆ ಇದ್ದು ಗುರುವಾರ ಮಠದಲ್ಲಿ ಅವರಿಗೆ ಔಷಧಿ ನೀಡಿದ್ದೇವು ಎಂದು ಶಸ್ತ್ರ ಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ.ರವೀಂದ್ರ ತಿಳಿಸಿದರು.

Click to comment

Leave a Reply

Your email address will not be published. Required fields are marked *