ಬೀಜಿಂಗ್: ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಹೋದ ವ್ಯಕ್ತಿಯೊಬ್ಬರಿಗೆ ಪೊಲೀಸರು ದಂಡ ವಿಧಿಸಿರುವ ಘಟನೆ ಚೀನಾದ ನಗರದಲ್ಲಿ ನಡೆದಿದೆ.
ಪ್ರತಿನಿತ್ಯ ಬಸ್ ಗಳು ಓಡಾಡುವ ಮಾರ್ಗದಲ್ಲಿ ಚಿಹ್ನೆ ಅಳಿಸಿ ಹೋಗಿತ್ತು. ಅದನ್ನು ಚೀನಾದ ವ್ಯಕ್ತಿಯೊಬ್ಬರು ವಾಹನಗಳು ಓಡಾಡುತ್ತಿದ್ದಂತೆ ರಸ್ತೆಯ ಮೇಲೆ ಕುಳಿತು ಅಳಿಸಿ ಹೋಗಿದ್ದ ಗುರುತುಗಳನ್ನು ಬರೆಯುತ್ತಿದ್ದರು. ಆದರೆ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
Advertisement
Advertisement
ವ್ಯಕ್ತಿಯ ಕುಟುಂಬದ ಹೆಸರನ್ನು ಕಾಯ್ ಎಂದು ಮಾತ್ರ ಗುರುತಿಸಲಾಗಿದ್ದು, ಚೀನಾದ ಪೂರ್ವ ನಗರದ ಲಿಯಾನ್ಯುಂಗ್ಯಾಂಗ್ ನ ಜಂಕ್ಷನ್‍ನಲ್ಲಿ ಬ್ಯುಸಿ ರಸ್ತೆಯಲ್ಲಿಯೇ ಕುಳಿತು ಅಳಿಸಿ ಹೋಗಿದ್ದ ಮಾರ್ಗ ಚಿಹ್ನೆಗಳನ್ನು ತನ್ನ ಕೈಯಲ್ಲಿಯೇ ಬರೆಯುತ್ತಿದ್ದರು. ಇದನ್ನು ನೋಡಿದ ಕಾರುಗಳು ನಿಧಾನವಾಗಿ ಚಲಿಸುತ್ತಿದ್ದವು. ಇದೆಲ್ಲವೂ ವಿಡಿಯೋದಲ್ಲಿ ಸರೆಯಾಗಿದೆ.
Advertisement
ಬಿಡುವಿಲ್ಲದ ರಸ್ತೆಯ ಮಧ್ಯದಲ್ಲಿಯೇ ಕುಳಿತು ಬಿಳಿ ಬಣ್ಣದಿಂದ ಗುರುತು ಚಿಹ್ನೆ ಬರೆಯುತ್ತಿದ್ದ 28 ವರ್ಷದ ವ್ಯಕ್ತಿಗೆ ಜಿಯಾಂಗ್ ಪ್ರಾಂತ್ಯದ ಪೊಲೀಸರು 1 ಸಾವಿರ ಯುವಾನ್(ಅಂದಾಜು 9600 ರೂ.) ದಂಡವನ್ನು ವಿಧಿಸಿದ್ದಾರೆ.
Advertisement
ನಾನು ಪ್ರತಿದಿನವು ನನ್ನ ಕೆಲಸ ಮುಗಿಸಿ ಮನೆಗೆ ಹೋಗಲು ಬಸ್ಸಿನಲ್ಲಿ ಅದೇ ಮಾರ್ಗವನ್ನು ಹಾದುಹೋಗುತ್ತಿದ್ದೆ. ಆದರೆ ಯಾವಗಲೂ ಆ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ತುಂಬಾ ಇರುತ್ತಿತ್ತು. ನಂತರ ಎಡಗಡೆ ಇದ್ದ ಗೆರೆ ಅಳಿಸಿ ಹೋಗಿತ್ತು. ಆದರೂ ಕೆಲವು ಕಾರುಗಳು ಮಾತ್ರ ಗೆರೆ ಮೇಲೆ ಹಾದು ಹೋಗುತ್ತಿದ್ದುವು. ಇದನ್ನು ನಾನು ಗಮನಿಸಿದೆ. ಆದ್ದರಿಂದ ಒಂದು ಗೆರೆ ಬರೆಯಲು ಪ್ರಯತ್ನ ಮಾಡಿದ್ದೆ ಎಂದು ಕಾಯ್ ಹೇಳಿದ್ದಾರೆ.
ನಂತರ ಅಧಿಕಾರಿಗಳು ರಸ್ತೆ ನಿರ್ವಹಣಾ ಕೆಲಸಗಾರರಿಗೆ ಹೇಳಿ ಕೈಯಲ್ಲಿ ಮಾಡುತ್ತಿದ್ದ ಕಾಯ್ ಅವರನ್ನು ರಸ್ತೆಯಿಂದ ಕಳುಹಿಸಿ ಅವರು ಗೆರೆ ಬರೆದಿದ್ದಾರೆ. ಆದರೆ ಪೊಲೀಸರು ಅವರಿಗೆ ದಂಡ ವಿಧಿಸಿದ ನಂತರ ಬಿಡುಗಡೆ ಮಾಡಿದ್ದಾರೆ.