ಬೈರೂತ್: ಇತ್ತೀಚೆಗಷ್ಟೇ ಪ್ಯಾಲೆಸ್ತೀನ್ (Palestin) ಪರ ಬ್ಯಾಟ್ ಬೀಸಿದ್ದ ಮಾಜಿ ನೀಲಿ ತಾರೆ ಮಿಯಾ ಕಲಿಫಾ (Mia Khalifa) ಅವರು ಇದೀಗ ಅಮೆರಿಕ ಸೇನೆಯನ್ನ ಗುರಿಯಾಗಿಸಿ ಟೀಕಿಸಿದ್ದಾರೆ.
ಮಾಜಿ ನೀಲಿ ತಾರೆ ಈ ಹಿಂದೆಯೂ ಸಾಕಷ್ಟು ಬಾರಿ ಪ್ಯಾಲೆಸ್ತೀನ್ ಪರವಾಗಿ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಅಮೆರಿಕದಲ್ಲಿ (USA) ನೆಲೆಸಿದ್ದರೂ ಸೇನೆಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ಮಿಯಾ ಕಲೀಫಾ ಅಮೆರಿಕ ಸೇನೆಯನ್ನು ಅಣುಕಿಸಿ, ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಭಾರತದ ಜೊತೆ ಚೇಷ್ಟೆ – ಶೀಘ್ರವೇ ಜಸ್ಟಿನ್ ಟ್ರುಡೋ ರಾಜೀನಾಮೆ?
Advertisement
Advertisement
ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೋನಲ್ಲಿ, ಇಸ್ರೇಲ್, ಲೆಬನಾನ್ (Lebanon), ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಉಲ್ಲೇಖಿಸಿ ಅಮೆರಿಕ ಸೇನೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮನೆಯಲ್ಲಿ ಕುಳಿತು ತಮಗೆ ಸೇರದ ಮಣ್ಣಿನಲ್ಲಿ, ತಮ್ಮ ಬಗ್ಗೆ ಕಾಳಜಿ ವಹಿಸದ ದೇಶಕ್ಕಾಗಿ ಯುದ್ಧ ಮಾಡುವ ಪ್ರತಿಯೊಬ್ಬರಿಗೂ ಶುಭೋದಯ ಎಂದಿದ್ದಾರೆ.
Advertisement
ನೀವು ಅಲ್ಲಿಗೆ ಹೋಗಿ ಯುದ್ಧ ಮಾಡಿದ್ದೀರಿ, ಮತ್ತೆ ನಿಮ್ಮ ದೇಶಕ್ಕೆ ಹಿಂತಿರುಗಿ, ಆಗ ಯುನೈಟೆಡ್ ಸ್ಟೇಟ್ಸ್ ನಿಮ್ಮ ಬಗ್ಗೆ ಎಷ್ಟು ಕಾಳಜಿ ವಹಿಸುತ್ತದೆ ಎಂದು ನೋಡಿ ಎಂದು ಮಕ್ಕಳ ದನಿಯಲ್ಲಿ ಅಪಹಾಸ್ಯ ಮಾಡಿದ್ದಾರೆ. ಅಲ್ಲದೇ ಓಹ್.. ನಾನು ತುಂಬಾ ದುಃಖಿತಳಾಗಿದ್ದೇನೆ ಎಂದು ಅಪಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: 5 ವರ್ಷಗಳ ಬಳಿಕ ಮುಖಾಮುಖಿ; ರಷ್ಯಾದಲ್ಲಿ ಮೋದಿ-ಜಿನ್‌ಪಿಂಗ್ ನಡ್ವೆ ದ್ವಿಪಕ್ಷೀಯ ಮಾತುಕತೆ
Advertisement
ಕಳೆದ ವರ್ಷ ಇಸ್ರೇಲ್-ಹಮಾಸ್ ಯುದ್ಧದ ಸಂದರ್ಭದಲ್ಲಿ ಮಿಯಾ ಕಲಿಫಾ ಪ್ಯಾಲೆಸ್ತೀನ್ ಪರವಾಗಿ ಮಾತನಾಡಿದ್ದು, ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಜೊತೆಗೆ ಮಿಯಾ ಅವರನ್ನು ಕೆಲಸದಿಂದಲೂ ವಜಾ ಮಾಡಲಾಗಿತ್ತು. ಮಿಯಾ ಅಮೆರಿಕಾದಲ್ಲಿ ವಾಸವಿದ್ದು, ಅಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.
ಇದಕ್ಕೂ ಮುನ್ನ ಮಿಯಾ ಕಲಿಫಾ ನೀಲಿಚಿತ್ರವೊಂದರಲ್ಲಿ ಹಿಜಬ್ ಧರಿಸಿದ್ದಕ್ಕಾಗಿ ಐಎಸ್‌ಐಎಸ್‌ನಿಂದ ಬೆದರಿಕೆಗಳು ಬಂದಿತ್ತು. ಆ ಬಳಿಕ ಇಸ್ರೇಲ್ ವರ್ಣಭೇದ ನೀತಿ ಹೊಂದಿರುವ ದೇಶ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಏರೋಸ್ಪೇಸ್ ಕಚೇರಿ ದಾಳಿಗೆ ಪ್ರತೀಕಾರ – ಇರಾಕ್, ಸಿರಿಯಾದಲ್ಲಿರುವ ಉಗ್ರರ ನೆಲೆ ಮೇಲೆ ಟರ್ಕಿ ಏರ್‌ಸ್ಟ್ರೈಕ್