ಚಿಕ್ಕಬಳ್ಳಾಪುರ: ಅಮ್ಮನ ಸಾವಿನ ನೋವು ತಾಳಲಾರದೇ ಅಣ್ಣ (Brother) ಮತ್ತು ತಂಗಿ (Sister) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ.
ಶಿಡ್ಲಘಟ್ಟ ನಗರದ ಶೆಟ್ಟಪ್ಪನ ತೋಪಿನ ಬಳಿಯ ರೈಲ್ವೇ ಹಳಿಗಳ ಬಳಿ ಘಟನೆ ನಡೆದಿದ್ದು, ಮೃತರು ಅಣ್ಣ ಪ್ರಭು ಮತ್ತು ತಂಗಿ ನವ್ಯ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸೈನಿಕರಿಗೆ ಸೆಲ್ಯೂಟ್: ಕೇವಲ 16 ಗಂಟೆಯಲ್ಲಿ 24 ಟನ್ ಸಾಮರ್ಥ್ಯದ 190 ಅಡಿ ಉದ್ದದ ಸೇತುವೆ ರೆಡಿ!
ಶಿಡ್ಲಘಟ್ಟದ ಪ್ರೇಮ ನಗರದ ನಿವಾಸಿಗಳಾಗಿರುವ ಪ್ರಭು ಮತ್ತು ನವ್ಯ ಆತ್ಮಹತ್ಯೆ ಶರಣಾಗುವ ಮುನ್ನ ಒಬ್ಬರ ಕೈಯನ್ನು ಒಬ್ಬರು ದಾರದಿಂದ ಕಟ್ಟಿಕೊಂಡು ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ.
ಇತ್ತೀಚೆಗೆ ತಾಯಿಯ ಮರಣದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದ ಇಬ್ಬರು ತಾಯಿಯ ಸಾವಿನ ಅಗಲಿಕೆಯ ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.