ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ವೇತಾ ಶ್ರೀವತ್ಸವ್ ತಮ್ಮ ಪ್ರೀತಿಯ ಪುತ್ರಿ ಜೊತೆಗೆ ದೇವಿ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಕೆಲವೊಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾದಿಂದ ದೂರ ಉಳಿದಿದ್ದರೂ ಶ್ವೇತಾ ಶ್ರೀವಾತ್ಸವ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ. ಪ್ರತಿಯೊಂದು ಹಬ್ಬವನ್ನು ಕೂಡ ಕುಟುಂಬದೊಂದಿಗೆ ಬಹಳ ಸಡಗರದಿಂದ ಆಚರಿಸುವ ಅವರು ಇದೀಗ ನವರಾತ್ರಿ ಹಬ್ಬವನ್ನು ತಮ್ಮ ಮಗಳು ಅಶ್ಮಿತಾ ಶ್ರೀವಾತ್ಸವ್ ಜೊತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದನ್ನೂ ಓದಿ: ಜನ್ಮದಿನಾಚರಣೆಯ ಸಂಭ್ರಮದಲ್ಲಿ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್
ಹೌದು, ನವರಾತ್ರಿ ಮೊದಲ ದಿನದಂದು ಶ್ವೇತಾ ಶ್ರೀವಾತ್ಸವ್, ಮಗಳೊಂದಿಗೆ ದೇವಿ ವೇಷ ಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಜೊತೆಗೆ ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಶ್ವೇತಾ ಶ್ರೀವಾತ್ಸವ್ ಕೆಂಪು ಬಣ್ಣದ ಸೀರೆಯುಟ್ಟು ಕೈಯಲ್ಲಿ ತ್ರಿಶೂಲ ಹಿಡಿದು ಕುಳಿತಿದ್ದರೆ, ಮಗಳು ಅಶ್ಮಿತಾ ಬಿಳಿ ಬಣ್ಣದ, ಕೆಂಪು ಬಾರ್ಡರ್‍ನ ಸೀರೆಯುಟ್ಟು ಅಮ್ಮನ ಮಡಿಲಿನಲ್ಲಿ ಕುಳಿತುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
ಒಟ್ಟಾರೆ ಅಮ್ಮ, ಮಗಳು ಹಲವು ಭಂಗಿಗಳಲ್ಲಿ ಫೋಟೋಗೆ ಪೋಸ್ ನೀಡಿದ್ದು, ಇಬ್ಬರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಕೃಷ್ಣಾಷ್ಟಮಿಗೆ ಶ್ವೇತಾ ಶ್ರೀವಾತ್ಸವ್ ಫೋಟೋಶೂಟ್
View this post on Instagram
ಇತ್ತೀಚೆಗಷ್ಟೇ ಗಣೇಶ ಹಬ್ಬದ ದಿನದಂದು ಶ್ವೇತಾ ಶ್ರೀವಾತ್ಸವ್ ಹಾಗೂ ಮಗಳು ಅಶ್ಮಿತಾ ಶ್ರೀವಾತ್ಸವ್ ಲಂಗ ದವಣಿ ತೊಟ್ಟು ಕರುವಿಗೆ ಸಿಹಿತಿಂಡಿಯನ್ನು ತಿನ್ನಿಸಿದ್ದರು. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.