ಮಂಗಳೂರು: ಕಾಂತಾರ (Kantara) ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದ ಯುವತಿಗೆ ಕೊನೆಗೂ ತನ್ನ ತಪ್ಪಿನ ಅರಿವಾಗಿದೆ. ತನ್ನ ತಪ್ಪಿನ ಅರಿವಾದ ಬಳಿಕ ಯುವತಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ ಸಲ್ಲಿಸಿ ಬೇಡಿಕೊಂಡಿದ್ದಾಳೆ.
Advertisement
ಹೌದು, ಬೆಂಗಳೂರು (Bengaluru) ಮೂಲದ ಮೇಕಪ್ ಆರ್ಟಿಸ್ಟ್ ಆಗಿರುವ ಶ್ವೇತಾ ರೆಡ್ಡಿ (Shwetha Reddy), ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ ವೇಷ ಧರಿಸಿ ಕಾಂತಾರಾ ಸಿನಿಮಾದ ವರಹಾ ರೂಪಂ ಹಾಡಿಗೆ (Varaha Rupam Song) ರೀಲ್ಸ್ ಮಾಡಿದ್ದರು. ಈಕೆಯ ರೀಲ್ಸ್ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಯುವತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸಿನಿಮಾದ ವರಾಹ ರೂಪಂ ಹಾಡಿಗೆ ರೀಲ್ಸ್ ಮಾಡಲು ದೈವಾರಾಧನೆ ಅಣಕ ಮಾಡಿದ್ದಾಳೆ ಅಂತ ನೆಟ್ಟಿಗರು ಕಿಡಿಕಾರಿದ್ದರು. ಅಲ್ಲದೇ ಶ್ವೇತಾ ರೆಡ್ಡಿಯನ್ನು ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ, ದೈವಗಳು ನೋಡಿಕೊಳ್ಳಲಿ ಎಂದು ಹಲವರು ಎಚ್ಚರಿಕೆ ಸಂದೇಶ ಹಾಕಿದ್ದರು. ಇದನ್ನೂ ಓದಿ: ಸ್ಟಾರ್ ನಟನ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಮ್ ಬ್ಯಾಕ್
Advertisement
Advertisement
ಈ ಬಳಿಕ ವೀಡಿಯೋ ಡಿಲೀಟ್ ಮಾಡಿ, ದಯವಿಟ್ಟು ಹರಕೆ ಇಡಬೇಡಿ ಎಂದು ಕ್ಷಮೆ ಕೋರಿದ್ದರು. ಇದೀಗ ಶ್ವೇತಾ ರೆಡ್ಡಿ ತೀರ್ಥ ಸ್ನಾನ ಮಾಡಿ ಮುಂದೇ ಏನು ತೊಂದರೆ ಆಗದಿರಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ ಸಲ್ಲಿಸಿದ್ದಾಳೆ. ಜೊತೆಗೆ ಯಕ್ಷಗಾನ ಇದೆಲ್ಲವೂ ಒಂದೇ ಎಂದು ಅಂದುಕೊಂಡಿದ್ದೆ. ದೈವದ ಕೋಲ ನೋಡುವ ಅವಕಾಶ ಸಿಕ್ಕರೆ ನೋಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಬಿಡಿ ಜೊತೆ ʼಕಾಂತಾರʼದ ರಿಷಬ್ ಶೆಟ್ಟಿ
Advertisement
ಈ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್‌ವೊಂದನ್ನು ಹಾಕಿರುವ ಶ್ವೇತಾ ರೆಡ್ಡಿ, ದಯವಿಟ್ಟು ಕ್ಷಮಿಸಿ, ನಮಗೆ ತುಂಬಾ ಭಕ್ತಿ, ಇಷ್ಟಪಟ್ಟು ಮಾಡಿದೆವು, ಯಾರನ್ನೂ ನೋಯಿಸುವ ಉದ್ದೇಶವಿಲ್ಲ, ದಯವಿಟ್ಟು ಹರಕೆ ಎಲ್ಲ ಇಡಬೇಡಿ, ನಾವು ಮಂಜುನಾಥ ಸ್ವಾಮಿಗೆ ಕ್ಷಮೆ ಕೋರುತ್ತೇವೆ. ನಿಮ್ಮ ದೈವಕ್ಕೆ, ನಿಮಗೆ, ನಿಮ್ಮ ಸಂಸ್ಕೃತಿಗೆ, ನಿಮ್ಮ ಮನಸ್ಸಿಗೆ ನಮ್ಮಿಂದ ನೋವಾಗಿದ್ದಲ್ಲಿ, ಅವಮಾನ ಎನಿಸಿದ್ದಲ್ಲಿ, ನಾನು ಮನಸಾರೆ ಕ್ಷಮೆ ಬೇಡುತ್ತೇನೆ. ಇನ್ನೂ ಎಂದು ಯಾರ ಮನಸ್ಸಿಗೂ, ಸಂಸ್ಕೃತಿಗೂ ಧಕ್ಕೆ ಯಾಗದಂತೆ ನಡೆಯುತ್ತೇನೆ. ತುಂಬಾ ಇಷ್ಟವಾಗಿ ನಮ್ಮ ಸಂಸ್ಕೃತಿ ಬಿಂಬಿಸಲು ಪ್ರಯತ್ನಿಸಿದೆ ಅಷ್ಟೇ. ದಯವಿಟ್ಟು ಕ್ಷಮಿಸಿ ಎಂದು ತಿಳಿಸಿದ್ದಾರೆ.