ನವದೆಹಲಿ: ಇತ್ತೀಚೆಗೆ ನಟಿಯೊಬ್ಬರು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿರುವ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಈ ಫೋಟೋ ನೋಡುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಈಗ ಟ್ರೋಲ್ ಮಾಡುತ್ತಿದ್ದವರಿಗೆ “ಧೂಮಪಾನ, ಮದ್ಯಪಾನ ಮಾಡುವುದರಿಂದ ನಾನು ಕೆಟ್ಟ ತಾಯಿ ಹೇಗಾಗುತ್ತೇನೆ” ಎಂದು ಖಡಕ್ ಉತ್ತರವನ್ನು ಕೊಟ್ಟಿದ್ದಾರೆ.
ನಟಿ ಶ್ವೇತಾ ಸಾಲ್ವೆ ಇತ್ತೀಚೆಗೆ ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಗೋವಾಗೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಬಿಕಿನಿ ತೊಟ್ಟು ಧೂಮಪಾನ ಮಾಡುತ್ತಿರುವ ಫೋಟೋವನ್ನು ಶ್ವೇತಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ಟ್ರೋಲ್ ಆಗಿತ್ತು.
Advertisement
Advertisement
“ನೆಟ್ಟಿಗರು ಈ ರೀತಿ ಮಾಡಲು ನಿಮಗೆ ನಾಚಿಕೆಯಾಗಲ್ಲವೇ? ನೀವು ಒಳ್ಳೆಯ ತಾಯಿ ಅಲ್ಲವೇ ಅಲ್ಲ. ನಿಮ್ಮ ಮಕ್ಕಳಿಗೂ ಈ ಅಭ್ಯಾಸ ಬರಲ್ಲವೇ?” ಎಂದು ಅಸಭ್ಯವಾಗಿ ಕಮೆಂಟ್ ಮಾಡಿದ್ದರು. ನೆಟ್ಟಿಗರ ಕಮೆಂಟ್ ನೋಡಿ ಶ್ವೇತಾ ಸಾಲ್ವೇ ಇನ್ ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ಎಲ್ಲರಿಗೂ ಟಾಂಗ್ ಕೊಟ್ಟಂತೆ ಉತ್ತರ ಕೊಟ್ಟಿದ್ದಾರೆ.
Advertisement
Advertisement
ಶ್ವೇತಾ ಸಾಲ್ವೇ ಪೋಸ್ಟ್:
“ಹೌದು ನಾನು ಕುಡಿಯುತ್ತೇನೆ, ಧೂಮಪಾನ ಮಾಡುತ್ತೇನೆ. ನಾನು ಪ್ರಾಮಾಣಿಕವಾಗಿ ಇರುತ್ತೇನೆ. ಬೇರೆಯವರನ್ನು ನಾನು ಈ ರೀತಿ ಪ್ರಶ್ನೆ ಮಾಡಲ್ಲ. ಆದ್ದರಿಂದ ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ನೀವು ಈ ರೀತಿ ಪ್ರಶ್ನೆ ಮಾಡಬಾರದು. ಕೇವಲ ಮದ್ಯ, ಸಿಗರೇಟ್ ಸೇದುವುದರಿಂದ ನಾನು ಕೆಟ್ಟ ತಾಯಿ ಹೇಗಾಗುತ್ತೇನೆ? ನನ್ನ ಪೋಷಕರು ನನ್ನನ್ನು ಜವಾಬ್ದಾರಿಯುತವಾಗಿ ಬೆಳೆಸಿದ್ದಾರೆ. ಸಮಾಜದಲ್ಲಿ ಒಳ್ಳೆಯದು, ಕೆಟ್ಟದ್ದನ್ನು ತಿಳಿಸಿ ಕೊಟ್ಟಿದ್ದಾರೆ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ನಾನು ಜೀವನವನ್ನು ವ್ಯರ್ಥ ಮಾಡಿಕೊಳ್ಳುವುದನ್ನು ನೀವು ನೋಡಿದ್ದೀರಾ? ನಾನು ಉದ್ಯೋಗ ಮಾಡದೆ ಕುಳಿತಿರುವುದನ್ನು ನೋಡಿದ್ದೀರಾ? ನಾನು ಅನೇಕ ಕೆಲಸಗಳನ್ನು ಮಾಡುತ್ತೇನೆ, ನಾನೊಬ್ಬ ನಟಿ, ಡ್ಯಾನ್ಸರ್ ಮತ್ತು ಉದ್ಯಮಿ ಕೂಡ ಆಗಿದ್ದೀನಿ. ನನ್ನ ವರ್ತನೆ ಇಷ್ಟವಾಗದಿದ್ದರೆ ಅನ್‍ಫಾಲೋ ಆಗಬಹುದು” ಎಂದು ಬರೆದು ಮದ್ಯಪಾನ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
ಶ್ವೇತಾ ಸಾಲ್ವೇ ಅವರು ತನ್ನ ಗೆಳೆಯ ಹರ್ಮಿತ್ ಸೇಥಿ ಅವರನ್ನು 2012ರಲ್ಲಿ ಮದುವೆಯಾಗಿದ್ದಾರೆ. ಈಗ ಈ ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/BpeibrvnamJ/?utm_source=ig_embed