ಸಿಂಗಾಪುರ: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್-2022 ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಭರ್ಜರಿ ಜಯ ಸಾಧಿಸಿದ್ದು, ಮೊದಲ ಸೂಪರ್-500 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
Advertisement
ಚೀನಾದ ವಾಂಗ್ ಝಿ ಯಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿಂಧು, ಸೂಪರ್-500 ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಆರಂಭದಲ್ಲೇ ವಾಂಗ್ ವಿರುದ್ಧ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್ 21-9 ಅಂತರದಿAದ ಗೆದ್ದುಕೊಂಡರು. 2ನೇ ಸೆಟ್‌ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. 2ನೇ ಸುತ್ತಿನ ಆರಂಭದಲ್ಲೇ ಅತ್ಯುತ್ತಮ ಸ್ಮ್ಯಾಶ್ ಮೂಲಕ 6 ಪಾಯಿಂಟ್ ಗಳಿಸಿ ಸಿಂಧು ಅವರನ್ನ ಇಕ್ಕಟ್ಟಿಗೆ ಸಿಲುಕಿಸಿದ್ದರು. ಪರಿಣಾಮ 2ನೇ ಸುತ್ತಿನಲ್ಲಿ ಸಿಂಧು 11-21 ಅಂತರದಲ್ಲಿ ಸೋತರು. ಇದನ್ನೂ ಓದಿ: ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ
Advertisement
Congratulations to our badminton maestro @Pvsindhu1 for winning her maiden Singapore Open title by defeating Wang Zhi Yi & bagging her third title in 2022. You continue to inspire a generation of athletes with your grit and determination. Keep making India proud ???????? . pic.twitter.com/oRrMoKEAlu
— Jagat Prakash Nadda (@JPNadda) July 17, 2022
Advertisement
ಮೊದಲೆರಡು ಸುತ್ತಿನಲ್ಲಿ ಇಬ್ಬರೂ ಸಮಬಲ ಸಾಧಿಸಿದ್ದರಿಂದ ಅಂತಿಮ ಸುತ್ತಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಅದರಂತೆ ಮೊದಲ 5 ಪಾಯಿಂಟ್‌ವರೆಗೂ ಜಿದ್ದಾ-ಜಿದ್ದಿನ ಹೋರಾಟ ಕಂಡು ಬಂದಿತು. ಈ ಹಂತದಲ್ಲಿ ಸಿಂಧು ಭರ್ಜರಿ ಸ್ಮ್ಯಾಶ್‌ಗಳ ಮೂಲಕ ವಾಂಗ್ ಅವರನ್ನು ಹಿಂದಿಕ್ಕಿದ್ದರು. ಇದರಿಂದ ವಾಂಗ್ ಝಿ ಯಿ ಅವರ ಪಾಯಿಂಟ್ 6 ಇದ್ದಾಗಲೇ ಸಿಂಧು ಅವರ ಪಾಯಿಂಟ್ 11ಕ್ಕೆ ಏರಿತ್ತು.
Advertisement
And the champ brings good news for India ???????? and makes us proud once again !@Pvsindhu1 defeats China’s Wang Zhi Yi to clinch her maiden #SingaporeOpen2022 !
Super Congratulations #PVSindhu !
Great game ????!
You inspire millions !#badminton pic.twitter.com/5ZDUtr0HeY
— Devendra Fadnavis (@Dev_Fadnavis) July 17, 2022
ಮಧ್ಯಂತರದಲ್ಲಿ ಮತ್ತೊಮ್ಮೆ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಚೀನಿ ಆಟಗಾರ್ತಿ ತೀವ್ರ ಪೈಪೋಟಿ ನೀಡಿದರು. ಸಿಂಧು 12 ಪಾಯಿಂಟ್ ಕಲೆಹಾಕುವಷ್ಟರಲ್ಲಿ ವಾಂಗ್ ಝಿ 11ಕ್ಕೆ ಬಂದು ನಿಂತರು. ಇದಾಗ್ಯೂ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಸಿಂಧು ಅವರು ಮತ್ತೊಮ್ಮೆ ಅಬ್ಬರಿಸಿ ಮೇಲುಗೈ ಸಾಧಿಸಿದರು. ಅಂತಿಮವಾಗಿ 21-15ರ ಅಂತರದಲ್ಲಿ ಗೆಲ್ಲುವ ಮೂಲಕ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.
ನಿನ್ನೆ 32 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಜಪಾನಿನ ಸೈನಾ ಕವಾಕಮಿ ಅವರನ್ನು 21-15 21-7 ಅಂತರದಲ್ಲಿ ಸೋಲಿಸುವ ಮೂಲಕ ಸಿಂಧು ಮೇಲುಗೈ ಸಾಧಿಸಿದ್ದರು. ಈ ಮೂಲಕ ವಿಶ್ವದ 38ನೇ ಶ್ರೇಯಾಂಕದ ಸೈನಾ ಕವಾಕಮಿ ವಿರುದ್ಧ ಸಂಪೂರ್ಣ ಹಿಡಿತ ತೋರಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ: Singapore Open 2022: ಫೈನಲ್‍ಗೆ ಲಗ್ಗೆ ಇಟ್ಟ ಪಿ.ವಿ ಸಿಂಧು
ಎರಡು ಬಾರಿ ಒಲಿಂಪಿಕ್ಸ್ ಪ್ರಶಸ್ತಿ ವಿಜೇತರಾಗಿರುವ ಪಿ.ವಿ.ಸಿಂಧು 2022ನೇ ಋತುವಿನಲ್ಲಿ ಸಿಂಗಾಪುರ್ ಓಪನ್ 2022 ಸೈಯದ್ ಮೋದಿ ಇಂಟರ್‌ನ್ಯಾಷನಲ್ ಹಾಗೂ ಸ್ವಿಸ್ ಓಪನ್ ಬಿಡಬ್ಲ್ಯೂಎಫ್ ಸೂಪರ್ -300 ಪ್ರಶಸ್ತಿಗಳನ್ನು ಗೆದ್ದ ನಂತರ ಸೂಪರ್ 500 ಪ್ರಶಸ್ತಿ ಸಿಂಧು ಅವರ 3ನೇ ಪ್ರಶಸ್ತಿಯಾಗಿದೆ.