ಬೆಂಗಳೂರಿನ (Bangalore) ಒಂದೊಂದೇ ಚಿತ್ರಮಂದಿರಗಳ ಬಾಗಿಲು ಹಾಕುತ್ತಿವೆ. ಒಟಿಟಿ, ಕಡಿಮೆ ಸಂಖ್ಯೆಯಲ್ಲಿ ಸಿನಿಮಾ ನಿರ್ಮಾಣ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಕೆಂಪೇಗೌಡ ರಸ್ತೆ ಅನೇಕ ಚಿತ್ರಮಂದಿಗಳು (Theatre) ಬಂದ್ ಆಗಿವೆ. ಆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಗಳು ತಲೆಯೆತ್ತಿವೆ. ಈಗ ಕಾವೇರಿ (Cauvery) ಚಿತ್ರಮಂದಿರದ ಸರದಿ.
Advertisement
ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದಾಗಿರುವ ಸ್ಯಾಂಕಿ ರಸ್ತೆಯ, ಪ್ಯಾಲೇಸ್ ಗುಟ್ಟಳ್ಳಿಯಲ್ಲಿರುವ ಕಾವೇರಿ ಚಿತ್ರಮಂದಿರ ತನ್ನ ಶಾಶ್ವತ ಪ್ರದರ್ಶನವನ್ನು ನಿಲ್ಲಿಸಲಿಲ್ಲ. ಕಳೆದ ಜನವರಿ 11ಕ್ಕೆ ಕಾವೇರಿಗೆ ಭರ್ತಿ 50 ವರ್ಷ ತುಂಬಿತ್ತು. ಗೋಲ್ಡನ್ ಜ್ಯುಬಿಲಿ ಆಚರಣೆಯನ್ನೂ ಮಾಡಲಾಗಿತ್ತು.
Advertisement
Advertisement
ನಾನಾ ಕಾರಣಗಳಿಂದಾಗಿ ಕಾವೇರಿ ಥಿಯೇಟರ್ ಇತಿಹಾಸದ ಪುಟದಲ್ಲಿ ದಾಖಲಾಗಿತ್ತು. ಮೆಜೆಸ್ಟಿಕ್ ಏರಿಯಾದಲ್ಲಿದ್ದ ಕಪಾಲಿ ಚಿತ್ರಮಂದಿರ ಹೊರತು ಪಡಿಸಿದರೆ, ಅತೀ ಹೆಚ್ಚು ಹಾಸನಗಳುಳ್ಳ ಚಿತ್ರಮಂದಿರ ಇದಾಗಿತ್ತು. 1300ರಷ್ಟು ಸೀಟುಗಳು ಈ ಚಿತ್ರಮಂದಿರದಲ್ಲಿದ್ದವು. ಜೊತೆಗೆ ಸಾಕಷ್ಟು ಚಿತ್ರಗಳು ಇಲ್ಲಿ ಶತದಿನ ಪ್ರದರ್ಶನ ಕೂಡ ಕಂಡಿವೆ.
Advertisement
ಕಾವೇರಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದು 1974 ಜನವರಿ 11ರಂದು. ಮೊದಲ ಚಿತ್ರ ಪ್ರದರ್ಶನವಾಗಿದ್ದ ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಪಂಜರ. ಕಮಲ್ ಹಾಸನ್ ನಟನೆಯ ಶಂಕರಾಭರಣಂ ಸಿನಿಮಾ ದಾಖಲೆ ರೀತಿಯಲ್ಲಿ ಪ್ರದರ್ಶನವಾಗಿತ್ತು. ಕನ್ನಡ, ತಮಿಳು, ಹಿಂದೆ, ಮಲಯಾಳಂ ಜೊತೆಗೆ ಹಾಲಿವುಡ್ ನ ಅನೇಕ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.
ಜನರು ಥಿಯೇಟರ್ ಬರುತ್ತಿಲ್ಲ. ಇಂತಹ ದೊಡ್ಡ ಕಟ್ಟಡವನ್ನು ನಿಭಾಯಿಸೋದು ಕಷ್ಟ. ಹಾಗಾಗಿ ಥಿಯೇಟರ್ ಬಂದು ಮಾಡಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಚಿತ್ರಮಂದಿರದ ಮಾಲೀಕರು ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.