Major Update: ಗಿಲ್‌ ಆರೋಗ್ಯದ ಬಗ್ಗೆ ಬ್ಯಾಟಿಂಗ್‌ ಕೋಚ್‌ ಹೇಳಿದ್ದೇನು?

Public TV
2 Min Read
Gill

ಮುಂಬೈ: ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ ಬುಧವಾರ, ಅಫ್ಘಾನಿಸ್ತಾನದ ವಿರುದ್ಧ ಕಣಕ್ಕಿದಿದೆ. ಈ ನಡುವೆ ಟೀಂ ಇಂಡಿಯಾ ಕ್ರಿಕೆಟ್‌ ತಂಡದ ಬ್ಯಾಟಿಂಗ್‌ ಕೋಚ್‌ ವಿಕ್ರಮ್ ರಾಥೋರ್ (Vikram Rathour) ಅವರು ಶುಭಮನ್‌ ಗಿಲ್‌ (Shubman Gill) ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Shubman Gill

ಗಿಲ್‌ ಅವರು ಚೇತರಿಕೆ ಹಂತದಲ್ಲಿದ್ದು, ಚೆನ್ನೈನ ಹೋಟೆಲ್‌ಗೆ (Chennai Hotel) ಮರಳಿದ್ದಾರೆ. ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದರಿಂದ ಅವರು ಆಸೀಸ್‌ ವಿರುದ್ಧ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಅಲ್ಲದೇ ವಿಶ್ರಾಂತಿಗಾಗಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಿಂದಲೂ ಹೊರಗುಳಿದಿದ್ದಾರೆ. ಸದ್ಯ ಅವರು ಚೆನ್ನೈನಲ್ಲೇ ಇದ್ದು, ವೈದ್ಯಕೀಯ ತಂಡ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲಂಕಾ ವಿರುದ್ಧ ಮೋಸದಾಟವಾಡಿತಾ ಪಾಕ್‌? – ಮತ್ತೆ ಮತ್ತೆ ಟೀಕೆಗೆ ಗುರಿಯಾಗ್ತಿರೋದೇಕೆ?

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಿಲ್‌ ಅವರು ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಮುಂಜಾಗ್ರತಾ ಕ್ರಮವಾಗಿ ಹೋಟೆಲ್‌ಗೆ ಮರಳಿದ್ದು, ಚೇರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಟೀಂ ಇಂಡಿಯಾದ ಪ್ಲೇಯಿಂಗ್‌-11 ನಲ್ಲಿ ಸೇರಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: World Cup 2023: ಇಂದು ಇಂಡೋ-ಅಫ್ಘಾನ್‌ ಕದನ – ಕೊಹ್ಲಿ ಅಬ್ಬರ ನೋಡಲು ಅಭಿಮಾನಿಗಳ ಕಾತರ

ಸದ್ಯ ಗಿಲ್‌ ಸ್ಥಾನದಲ್ಲಿ ಇಶಾನ್‌ ಕಿಶನ್‌ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದು, ನಾಯಕ ರೋಹಿತ್ ಶರ್ಮಾ ಜೊತೆಗೆ ಓಪನಿಂಗ್‌ ಮಾಡಲು ಸಮರ್ಥವಾಗಿದ್ದಾರೆ. ಪ್ರತಿಯೊಬ್ಬ ಆಟಗಾರರು ತಮ್ಮದೇ ರೀತಿಯಲ್ಲಿ ಆಡುತ್ತಿದ್ದಾರೆ. 50 ಓವರ್‌ ಫಾರ್ಮ್ಯಾಟ್‌ನಲ್ಲಿ ಯಾವ ಸ್ವರೂಪದಲ್ಲಿ ಆಡಬೇಕೆಂಬುದನ್ನು ತಿಳಿದುಕೊಂಡಿದ್ದಾರೆ. ಹಾಗಾಗಿ ನಾವು ಅಂದುಕೊಂಡಿದ್ದನ್ನು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಿಜ್ವಾನ್‌, ಶಫೀಕ್ ಶತಕದಾಟ – ಲಂಕಾ ವಿರುದ್ಧ ಪಾಕ್‌ಗೆ ವಿಶ್ವದಾಖಲೆಯ ಜಯ

ಪ್ರಸಕ್ತ ವರ್ಷದಲ್ಲೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 1,200ಕ್ಕೂ ಹೆಚ್ಚು ರನ್ ಬಾರಿಸಿ ಫುಲ್ ‌ಫಾರ್ಮ್‌ನಲ್ಲಿದ್ದ ಶುಭಮನ್‌ ಗಿಲ್‌, ಡೆಂಗ್ಯೂ ಜ್ವರದ ಕಾರಣ ಅಕ್ಟೋಬರ್‌ 8ರಂದು ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ (Australia) ವಿರುದ್ಧದ ಪಂದ್ಯಕ್ಕೂ ಅಲಭ್ಯರಾಗಿದ್ದರು.

Web Stories

Share This Article